ತರಬೇತಿ ಕೊರತೆ: 40% ಇಂಟರ್ ಮೀಡಿಯೇಟ್ ಮುಸ್ಲಿಮ್ ವಿದ್ಯಾರ್ಥಿಗಳು ಅನುತ್ತೀರ್ಣ

ಹೈದರಾಬಾದ್: ಸೋಶಿಯಲ್ ಡಾಟಾ ಇನಿಶಿಯೇಟಿವ್ ಫೋರಂ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಮುಸ್ಲಿಂ ಸಮುದಾಯದ 40% ವಿದ್ಯಾರ್ಥಿಗಳು ಇಂಟರ್ ಮೀಡಿಯೇಟ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿಲ್ಲ ಎಂಬ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ.
ಅಸಮರ್ಪಕ ತರಬೇತಿ ಮತ್ತು ಮಾರ್ಗದರ್ಶನ ಕೊರತೆಯಿಂದ ಮುಸ್ಲಿಂ ವಿದ್ಯಾರ್ಥಿಗಳ ಫಲಿತಾಂಶ ಕಳಪೆ ಮಟ್ಟಕ್ಕೆ ತಲುಪಿದೆ ಎಂದು ಅಧ್ಯಯನವು ಹೇಳಿದೆ.
ಸೋಶಿಯಲ್ ಡಾಟಾ ಇನಿಶಿಯೇಟಿವ್ ಫೋರಂನ ಸೈಯದ್ ಖಾಲಿದ್ ಸೈಫುಲ್ಲಾ ಅವರ ಪ್ರಕಾರ, ಈ ವರ್ಷ ಇಂಟರ್ ಮೀಡಿಯೇಟ್ ಪರೀಕ್ಷೆಗೆ ಹಾಜರಾದ 4.19 ಲಕ್ಷ ವಿದ್ಯಾರ್ಥಿಗಳಲ್ಲಿ 71,619 ವಿದ್ಯಾರ್ಥಿಗಳು ಮುಸ್ಲಿಮರು. ರಾಜ್ಯದಲ್ಲಿ ಒಟ್ಟಾರೆಯಾಗಿ ಅನುತ್ತೀರ್ಣರಾದವರ ಪ್ರಮಾಣವು 36% ಆಗಿದ್ದರೆ, ಮುಸ್ಲಿಂ ವಿದ್ಯಾರ್ಥಿಗಳಲ್ಲಿ 40% ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟು 32,686 ಮುಸ್ಲಿಂ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.
Next Story





