ಮನೀಶ್ ಸಿಸೋಡಿಯಾರ ನ್ಯಾಯಾಂಗ ಬಂಧನ ಜೂನ್ 1 ರವರೆಗೆ ವಿಸ್ತರಿಸಿದ ದಿಲ್ಲಿ ನ್ಯಾಯಾಲಯ
ಅಕ್ರಮ ಹಣ ವರ್ಗಾವಣೆ ಪ್ರಕರಣ

ಅಕ್ರಮ ಹಣ ವರ್ಗಾವಣೆ ಪ್ರಕರಣ
ಹೊಸದಿಲ್ಲಿ: ಆಪಾದಿತ ಅಬಕಾರಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ(Manish Sisodia) ಅವರ ನ್ಯಾಯಾಂಗ ಬಂಧನವನ್ನು ದಿಲ್ಲಿ ನ್ಯಾಯಾಲಯವು ಜೂನ್ 1 ರವರೆಗೆ ವಿಸ್ತರಿಸಿ ಮಂಗಳವಾರ ಆದೇಶ ನೀಡಿದೆ.
ರಾಜಕಾರಣಿ ಸಿಸೋಡಿಯಾಗೆ ಜೈಲಿನೊಳಗೆ ಪುಸ್ತಕಗಳ ಜೊತೆಗೆ ಕುರ್ಚಿ ಹಾಗೂ ಟೇಬಲ್ ನೀಡುವುದನ್ನು ಪರಿಗಣಿಸುವಂತೆ ನ್ಯಾಯಾಧೀಶರು ಜೈಲು ಅಧಿಕಾರಿಗಳಿಗೆ ಸೂಚಿಸಿದರು.
ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ನ್ಯಾಯಾಲಯದಿಂದ ಹೊರಗೆ ಕರೆತರುವಾಗ, ದಿಲ್ಲಿಯ ಸೇವೆಗಳ ವಿಷಯದಲ್ಲಿ ಕೇಂದ್ರದ ಸುಗ್ರೀವಾಜ್ಞೆಯನ್ನು ಬದಲಿಸುವ ಮಸೂದೆಯನ್ನು ಉಲ್ಲೇಖಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮೋದಿ ತುಂಬಾ ದುರಹಂಕಾರಿಯಾಗಿದ್ದಾರೆ" ಎಂದು ಆರೋಪಿಸಿದರು.
Next Story





