ಅಂಜಾರಿನಲ್ಲಿ ಬೇಸಿಗೆ ಶಿಬಿರ ಸಮಾರೋಪ

ಉಡುಪಿ : ಹಿರಿಯಡ್ಕ ಅಂಜಾರಿನಲ್ಲಿ ಶ್ರೀದುರ್ಗಾಪರಮೇಶ್ವರಿ ಮರಾಠಿ ಕಲಾ ಸಂಘದ ವತಿಯಿಂದ ಜರಗಿದ ಬೇಸಿಗೆ ಶಿಬಿರ ಮೇ 21ರಂದು ಸಮಾಪನಗೊಂಡಿತು.
ಅಂಜಾರು ಮಠದ ಸೀತಾರಾಮ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಡಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾನಂದ ಪ್ರಭು ಹಾಗೂ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸಂಧ್ಯಾ ಕಾಮತ್ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಭರತ್‌ರಾಜ್ ಪರ್ಕಳ, ಅಂಕಿತ ನಾಯ್ಕ್, ಹರೀಶ್ ನಾಯ್ಕ್ ಹಾಗೂ ರಾಘವೇಂದ್ರ ಮಣಿಪಾಲ ಅವರನ್ನು ಸನ್ಮಾನಿಸಲಾಯಿತು ವೇದಿಕೆಯಲ್ಲಿ ಶಿಬಿರದ ಸಂಯೋಜಕ ನಾಗೇಶ್ ನಾಯ್ಕ್, ಗೌರವಾಧ್ಯಕ್ಷ ವಿಠ್ಠಲ್ ನಾಯ್ಕ್, ಬಾಬು ನಾಯ್ಕ್ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ವೆಂಕಟೇಶ್ ನಾಯ್ಕ್ ಸ್ವಾಗತಿಸಿದರು. ಕವಿತಾ ಪ್ರವೀಣ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಿಬಿರದ ಮಕ್ಕಳಿಂದ ಕಂಗಿಲು, ಜಾನಪದ ನೃತ್ಯ ಹಾಗೂ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.
Next Story