ದ.ಕ.ಜಿಲ್ಲಾ ಕಾರಾಗೃಹದಲ್ಲಿ ಪರಿವರ್ತನಾ ಕಾರ್ಯಕ್ರಮ

ಮಂಗಳೂರು, ಮೇ 23: ಕ್ಷಣಿಕ ಉದ್ವೇಗದ ಕೃತ್ಯದಿಂದ ಜೈಲಿನಲ್ಲಿ ಕಾಲ ಕಳೆಯುವಂತರಿಗೆ ಸಮಾಜದಲ್ಲಿ ಮತ್ತೆ ಕೂಡಿ ಬಾಳಲು ಅವಕಾಶ ಸಿಗಬೇಕಾಗಿದ್ದಲ್ಲಿ ಮನ ಪರಿವರ್ತನೆ ಮುಖ್ಯವಾಗುತ್ತದೆ ಎಂದು ಪತ್ರಕರ್ತ ರೇಮಂಡ್ ಡಿಕುನ್ಹಾ ತಾಕೊಡೆ ಹೇಳಿದರು.
ದ.ಕ. ಜಿಲ್ಲಾ ಕಾರಾಗೃಹದಲ್ಲಿ ನಡೆದ ಪರಿವರ್ತನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ನ್ಯಾಯವಾದಿ, ಪ್ರಾಧ್ಯಾಪಕಿ ಕವಿತಾ ಮುರುಗೇಶ್ ಮಾತನಾಡಿ ‘ಮಾನವೀಯತೆಯ ನೆಲೆಯಲ್ಲಿ ಜೈಲಿನಲ್ಲಿರುವ ವರಿಗೆ ಪರಿವರ್ತನೆಯ ಹಾದಿ ತೋರಿಸಿಕೊಡಲು ಪ್ರಯತ್ನಿಸಿದರೂ ತಾವು ಮಾಡಿದ ಅಪರಾಧದ ಪ್ರಮಾಣವನ್ನು ಆಧರಿಸಿ ನ್ಯಾಯ ದೊರಕಿಸಿಕೊಡಲು ಅದರದ್ದೇ ಆದ ಇತಿಮಿತಿ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮತ್ತು ತಮ್ಮಲ್ಲಾಗುವ ಪರಿವರ್ತನೆಯನ್ನು ಸಮಾಜವು ನಿರೀಕ್ಷಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ದ.ಕ. ಜಿಲ್ಲಾ ಕಾರಾಗೃಹದ ಅಧೀಕ್ಷಕ ಬಿ.ಟಿ. ಓಬಳೇಶಪ್ಪಮಾತನಾಡಿದರು. ವೇದಿಕೆಯಲ್ಲಿ ಜೈಲರ್‌ಗಳಾದ ರಾಜೇಂದ್ರಸಿಂಗ್ ಕೋಪರ್ಡೆ, ಶಿದ್ಧರಾಮಪ್ಪ, ವಿಜಯ ಕುಮಾರ್ ಸಂಕಾ, ಚೆನ್ನಮ್ಮ ಬಿದರಿ ಉಪಸ್ಥತರಿದ್ದರು.





