ಬೆಂಗಳೂರು ಕೆಳಸೇತುವೆಗೆ ಮತ್ತೋರ್ವ ಬಲಿ

ಬೆಂಗಳೂರು, ಮೇ 23: ನಗರದ ನೈಸ್ ರಸ್ತೆಯ ಕಾಚೋಹಳ್ಳಿ ವ್ಯಾಪ್ತಿಯ ಕೆಳಸೇತುವೆಯಲ್ಲಿ ನೀರು ನುಗ್ಗಿದ ಪರಿಣಾಮ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ರಾಮನಗರ ಮೂಲದ ಫಕ್ರುದ್ದೀನ್ (48) ಎಂಬುವರು ಮೃತಪಟ್ಟಿದ್ದು, ಇವರು ನೆಲಮಂಗಲದ ಕಾರ್ಖಾನೆಯೊಂದರಲ್ಲಿ ಲೇತ್ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಫಕ್ರುದ್ದೀನ್ ಪ್ರತಿನಿತ್ಯ ರಾಮನಗರದಿಂದ ನೆಲಮಂಗಲಕ್ಕೆ ಸ್ಕೂಟರ್ ನಲ್ಲಿ ಬಂದು ಹೋಗುತ್ತಿದ್ದರು. ಅದರಂತೆ ಸೋಮವಾರ ಕೆಲಸ ಮುಗಿಸಿಕೊಂಡು ರಾತ್ರಿ 8.30ರ ಸುಮಾರಿನಲ್ಲಿ ಸ್ಕೂಟರ್‍ನಲ್ಲಿ ರಾಮನಗರಕ್ಕೆ ಹೋಗುತ್ತಿದ್ದಾಗ ಮಳೆ ಬರುತ್ತಿತ್ತು. ನೈಸ್ ರಸ್ತೆಯ ಕಾಚೋಹಳ್ಳಿ ಅಂಡರ್ ಪಾಸ್ ಬಳಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಸ್ಕೂಟರ್ ಉರುಳಿ ಬಿದ್ದ ಪರಿಣಾಮ ಫಕ್ರುದ್ದೀನ್ ಅವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಗಿದೆ.
ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
Next Story