ಡಿಸಿಎಂ, ನೂತನ ಸಚಿವರಿಗೆ ಸರಕಾರಿ ವಸತಿ ಗೃಹ ಹಂಚಿಕೆ

ಬೆಂಗಳೂರು, ಮೇ 23:ನೂತನ ಸರಕಾರ ರಚನೆಯಾದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಹಾಗೂ ಸಚಿವರಿಗೆ ಸರಕಾರಿ ವಸತಿ ಗೃಹಗಳನ್ನು ಹಂಚಿಕೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಯವರ ಆದೇಶದಂತೆ ಸರಕಾರದ ಅಪರ ಕಾರ್ಯದರ್ಶಿ ವೀರಭದ್ರ ಹಂಚಿನಾಳ ಅವರು ಈ ಕೆಳಕಂಡಂತೆ ಸರಕಾರಿ ವಸತಿ ಗೃಹ ಹಂಚಿಕೆ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ : ನಂ-1, ಕುಮಾರ ಕೃಪ ಈಸ್ಟ್, ಗಾಂಧಿಭವನ ರಸ್ತೆ, ಬೆಂಗಳೂರು.
ಸಚಿವ ಎಂ.ಬಿ.ಪಾಟೀಲ್: ನಂ-1. ರೇಸ್: ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ ಬೆಂಗಳೂರು.
ಸಚಿವ ಕೆ.ಜೆ ಜಾರ್ಜ್; ನಂ-2, ರೇಸ್, ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.
ಸಚಿವ ಡಾ.ಜಿ.ಪರಮೇಶ್ವರ: ನಂ-94/ಎ, 9ನೇ ಕ್ರಾಸ್, ಸದಾಶಿವನಗರ, ಆರ್.ಎಂ.ವಿ ಬಡಾವಣೆ, ಬೆಂಗಳೂರು-80.
ಸಚಿವ ಪ್ರಿಯಾಂಕ್ ಖರ್ಗೆ: ನಂ-4, ರೇಸ್, ವ್ಯೂ ಕಾಟೇಜ್, ರೇಸ್ ಕೋರ್ಸ್ ರಸ್ತೆ, ಬೆಂಗಳೂರು.
Next Story