ಮೇ 25ರಂದು ಶರಫುಲ್ ಉಲಮಾರ ನಾಲ್ಕನೇ ವಾರ್ಷಿಕ ಅನುಸ್ಮರಣೆ ಹಾಗೂ ಅಧ್ಯಾತ್ಮಿಕ ಸಮ್ಮೇಳನ
ನರಿಂಗಾನ: ಮಂಜನಾಡಿ ಅಲ್ ಮದೀನ ಸಂಸ್ಥೆಯ ಸಂಸ್ಥಾಪಕರಾದ ಮರ್ಹೂಂ ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ರವರ ನಿಧನದ ನಾಲ್ಕನೇ ವಾರ್ಷಿಕ ಅನುಸ್ಮರಣಾ ಕಾರ್ಯಕ್ರಮವು ಮೇ 25 ನೇ ಗುರುವಾರದಂದು ಅಲ್ ಮದೀನ ಸಂಸ್ಥೆಯಲ್ಲಿ ಖತಮುಲ್ ಕುರ್ಆನ್, ಮೌಲಿದ್ ಪಾರಾಯಣ, ಸಾಮೂಹಿಕ ಝಿಯಾರತ್, ಪ್ರಾರ್ಥನಾ ಸಂಗಮ, ಬುರ್ದಾ ಮಜ್ಲಿಸ್ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಅಂದು ಸಾಯಂಕಾಲ 5 ಗಂಟೆಗೆ ಅಧ್ಯಾತ್ಮಿಕ ಮಹಾ ಸಮ್ಮೇಳನ ನಡೆಯಲಿದ್ದು ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್, ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕರ್ನಾಟಕ ವಿಧಾನ ಸಭೆಯ ನೂತನ ಸ್ಪೀಕರ್ ಜನಾಬ್ ಯು.ಟಿ.ಖಾದರ್, ಹಾಜಿ ಯೆನಪೋಯ ಅಬ್ದುಲ್ಲ ಕುಂಞಿ, ಅಶ್ರಫ್ ತಂಙಳ್ ಆದೂರ್, ಮಹಮೂದುಲ್ ಫೈಝಿ ವಾಲೆಮುಂಡೇವು, ಸಯ್ಯಿದ್ ಇಸ್ಮಾಈಲ್ ತಂಙಳ್ ಉಜಿರೆ, ಡಾ ಹಝ್ರತ್ ಫಾಝಿಲ್ ರಝ್ವಿ ಕಾವಳಕಟ್ಟೆ, ಶಾಫಿ ಸಅದಿ, ಎಂಎಸ್ಎಂ ಅಬ್ದುರ್ರಶೀದ್ ಝೈನಿ, ಅಬೂ ಸುಫ್ಯಾನ್ ಇಬ್ರಾಹೀಂ ಮದನಿ, ಅಬ್ದುಲ್ ಹಫೀಲ್ ಸಅದಿ, ಹಾಫಿಲ್ ಸುಫ್ಯಾನ್ ಸಖಾಫಿ ಹಾಗೂ ಎಸ್ಸೆಸ್ಸೆಫ್, ಎಸ್ ವೈ ಎಸ್, ಮುಸ್ಲಿಂ ಜಮಾತ್, ಎಸ್ ಜೆ ಎಂ, ಎಸ್ ಎಂ ಎ ಸಂಘಟನೆಗಳ ನಾಯಕರ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಮೌಲಾನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದು ನೂರುಸ್ಸಾದಾತ್ ಬಾಯಾರ್ ತಂಙಳ್ ಸಮಾರೋಪ ಪ್ರಾರ್ಥನೆ ನಡೆಸಲಿದ್ದಾರೆ. ಇದೇ ಸಂದರ್ಭ ಅಲ್ ಮದೀನದ 30 ನೇ ವಾರ್ಷಿಕೋತ್ಸವದ ದಿನಾಂಕ ಘೋಷಣೆಯೂ, ಸಂಸ್ಥೆಯ ವಿನೂತನ ಲೋಗೋ ದ ಅನಾವರಣವೂ ನಡೆಯಲಿರುವುದೆಂದು ಅಲ್ ಮದೀನ ಸಂಸ್ಥೆಯ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ತಿಳಿಸಿದ್ದಾರೆ.





