ನಟ ನಿತೀಶ್ ಪಾಂಡೆ ಹೃದಯಾಘಾತದಿಂದ ನಿಧನ

ಹೊಸದಿಲ್ಲಿ: ಹಿಟ್ ಚಿತ್ರಗಳಾದ ದಬಾಂಗ್-2 ಹಾಗೂ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸಿರುವ ಜನಪ್ರಿಯ ಬಾಲಿವುಡ್ ನಟ ನಿತೇಶ್ ಪಾಂಡೆ ಮಹಾರಾಷ್ಟ್ರದ ನಾಸಿಕ್ ಬಳಿಯ ಇಗತ್‌ಪುರಿ ಹೋಟೆಲ್‌ನಲ್ಲಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅವರಿಗೆ 50 ವರ್ಷ ವಯಸ್ಸಾಗಿತ್ತು.
ಪಾಂಡೆಯವರ ಸೋದರ ಸಂಬಂಧಿ ಸಿದ್ಧಾರ್ಥ್ ನಗರ್ ಪಾಂಡೆ ಅವರ ನಿಧನವನ್ನು ಖಚಿತಪಡಿಸಿದರು.
ಇಗತ್‌ಪುರಿಯಲ್ಲಿ ಶೂಟಿಂಗ್‌ನಲ್ಲಿದ್ದ ಪಾಂಡೆ ಹೃದಯಾಘಾತಕ್ಕೆ ಒಳಗಾಗಿದ್ದರು. ಹೊಟೇಲ್ ಗೆ ಧಾವಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಹೋಟೆಲ್ ಸಿಬ್ಬಂದಿ ಹಾಗೂ ನಿತೇಶ್ ಪಾಂಡೆ ಆಪ್ತರನ್ನು ವಿಚಾರಣೆ ನಡೆಸಲಾಗುತ್ತಿದೆ. ನಿತೇಶ್ ಪಾಂಡೆ ಅವರು ಶಾರುಖ್ ಖಾನ್ ಅವರೊಂದಿಗೆ 'ಓಂ ಶಾಂತಿ ಓಂ' ಚಿತ್ರದ ನಟನೆಯ ಮೂಲಕ ಹೆಚ್ಚು ಹೆಸರುವಾಸಿಯಾಗಿದ್ದರು.
"ನನ್ನ ಸೋದರ ಮಾವ ಇನ್ನಿಲ್ಲ. ನನ್ನ ಸಹೋದರಿ ಅರ್ಪಿತಾ ಆಘಾತಕ್ಕೊಳಗಾಗಿದ್ದಾರೆ. ಅವರಿಗೆ ಯಾವುದೇ ಹೃದಯ ಕಾಯಿಲೆಯ ಇತಿಹಾಸವಿದೆ ಎಂದು ನಾನು ಭಾವಿಸುವುದಿಲ್ಲ'' ಎಂದು ನಿತೇಶ್ ಪಾಂಡೆ ಅವರ ಸೋದರ ಸಂಬಂಧಿ ಸಿದ್ಧಾರ್ಥ್ ನಗರ್ 'ಈಟಿಮ್ಸ್'ಗೆ ತಿಳಿಸಿದ್ದಾರೆ.
ನಿತೇಶ್ ಪಾಂಡೆ ಟಿವಿ ಹಾಗೂ ಚಲನಚಿತ್ರಗಳಿಂದ ಪರಿಚಿತ ಮುಖವಾಗಿದ್ದರು. ಅವರು 90 ರ ದಶಕದಲ್ಲಿ ರಂಗಭೂಮಿ ನಟರಾಗಿ ವೃತ್ತಿಜೀವನ ಆರಂಭಿಸಿದರು ಮತ್ತು ನಂತರ ತೇಜಸ್ ಎಂಬ ಅಲ್ಪಾವಧಿಯ ಟಿವಿ ಶೋನಲ್ಲಿ ಪತ್ತೇದಾರಿ ಪಾತ್ರವನ್ನು ನಿರ್ವಹಿಸಿದ್ದರು.







