ವಿಧಾನಸಭೆಯಲ್ಲಿ ಕಾಂಗ್ರೆಸ್ ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ: ಶಾಸಕ ಯತ್ನಾಳ್
''ಸ್ಪೀಕರ್ ಆಗಿ ಖಾದರ್ ಅಥವಾ ಝಮೀರ್ ಅವರೇ ಆಗಲಿ...''

''ಸ್ಪೀಕರ್ ಆಗಿ ಖಾದರ್ ಅಥವಾ ಝಮೀರ್ ಅವರೇ ಆಗಲಿ...''
ಬೆಂಗಳೂರು: 'ವಿಧಾನಸಭೆಯಲ್ಲಿ ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ' ಎಂದು ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ನಾನು ಅಪೇಕ್ಷೆಪಟ್ಟಿಲ್ಲ, ಒಂದು ವೇಳೆ ವಿಪಕ್ಷ ನಾಯಕನಾಗಿ ಆಯ್ಕೆಯಾದರೆ ಕಾಂಗ್ರೆಸ್ನವರಿಗೆ ತಕ್ಕ ಉತ್ತರ ಕೊಡಬಲ್ಲವನು ನಾನೊಬ್ಬನೆ. ನಾನು ವಿರೋಧ ಪಕ್ಷದ ನಾಯಕನಾದರೆ ವಿದಾನಸಭೆಯಲ್ಲಿ ಮಜಾ ಇರುತ್ತದೆ'' ಎಂದು ತಿಳಿಸಿದರು.
'ಸ್ಪೀಕರ್ ಆಗಿ ಖಾದರ್ ಅಥವಾ ಝಮೀರ್ ಅವರೇ ಆಗಲಿ, ಅವರು ಸಂವಿಧಾನದಂತೆಯೇ ನಡೆಯಬೇಕಾಗುತ್ತದೆ' ಎಂದು ಪ್ರಶ್ನೆಯೊಂದಕ್ಕೆ ಯತ್ನಾಳ್ ಪ್ರತಿಕ್ರಿಯಿಸಿದರು.
Next Story