Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೊಲೀಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕಸ...

ಪೊಲೀಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕಸ ಆಯುವ ವ್ಯಕ್ತಿಯ ಪುತ್ರಿ!

24 May 2023 5:40 PM IST
share
ಪೊಲೀಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕಸ ಆಯುವ ವ್ಯಕ್ತಿಯ ಪುತ್ರಿ!

ಪುಣೆ: ಬಡ ತ್ಯಾಜ್ಯ ಆಯುವವನ ಪುತ್ರಿ ಶಾಯದಾ ಮಕಾನದಾರ್ (22) ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾಗುವ ಮೂಲಕ ತನ್ನ ತಂದೆಯ ಬಹುಕಾಲದ ಕನಸನ್ನು ನನಸಾಗಿದ್ದಾರೆ. ಶಾಯದಾ ನೆನಪಿಸಿಕೊಳ್ಳಬಹುದಾದ ಸಮಯದಿಂದಲೂ ಆಕೆಯ ತಂದೆ ಮಗಳನ್ನು ಪೊಲೀಸ್ ಸಮವಸ್ತ್ರದಲ್ಲಿ ನೋಡಲು ಬಯಸಿದ್ದರು ಎಂದು indianexpress.com ವರದಿ ಮಾಡಿದೆ.

‘ಬೀದಿಗಳಲ್ಲಿ ತ್ಯಾಜ್ಯಗಳನ್ನು ಹೆಕ್ಕುತ್ತಿದ್ದಾಗ ನನ್ನ ತಂದೆ ಕರ್ತವ್ಯನಿರತ ಮಹಿಳಾ ಪೊಲೀಸರನ್ನು ನೋಡುತ್ತಿದ್ದರು. ನಾನೂ ಅವರಂತೆ ಆಗಬೇಕೆಂದು ಅವರು ಬಯಸಿದ್ದರು,ಏಕೆಂದರೆ ಈ ಜಗತ್ತಿನಲ್ಲಿ ಹುಡುಗಿಯೋರ್ವಳು ಸ್ವತಂತ್ರ ಮತ್ತು ಸುರಕ್ಷಿತಳಾಗಿರಲು ಅದು ಅತ್ಯುತ್ತಮ ಮಾರ್ಗ ಎಂದು ಅವರು ಭಾವಿಸಿದ್ದರು’ ಎಂದು ಶಾಯದಾ ಸುದ್ದಿಸಂಸ್ಥೆಗೆ ತಿಳಿಸಿದರು.

ಪುಣೆಯಲ್ಲಿ ಕಡಿಮೆ ಆದಾಯದ ಜನರು ವಾಸವಿರುವ ಜೈಹಿಂದ್ ನಗರದ ನಿವಾಸಿಯಾಗಿರುವ ಶಾಯದಾ,ಆಕೆಯ ತಂದೆ ರೋಷನ್ ಮತ್ತು ನೆರೆಕರೆಯವರ ಕನಸು ಈಗ ನನಸಾಗಿದೆ. ಪುಣೆ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳಲು ಶಾಯದಾ ಸಜ್ಜಾಗಿದ್ದಾರೆ.

ಮಾ.20ರಂದು ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶಾಯದಾ ತಿಂಗಳ ಬಳಿಕ ಲಿಖಿತ ಪರೀಕ್ಷೆಗೆ ಹಾಜರಾಗಿದ್ದರು. 8,000ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,ಶಾಯದಾ ಸೇರಿದಂತೆ ಕೇವಲ 700 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಳೆದ ವಾರವಷ್ಟೇ ದೈಹಿಕ ಪರೀಕ್ಷೆ ಮತ್ತು ದಾಖಲೆಗಳ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಅವರು ಈಗ ಒಂಭತ್ತು ತಿಂಗಳ ತರಬೇತಿಗೆ ಹಾಜರಾಗಲು ಕಾತುರರಾಗಿದ್ದಾರೆ.

‘ಮುಂದೊಂದು ದಿನ ನನ್ನ ಮಗಳು ಖಾಕಿ ಸಮವಸ್ತ್ರ ಧರಿಸಬೇಕು ಎನ್ನುವುದು ನಿಜಕ್ಕೂ ನನ್ನ ಕನಸಾಗಿತ್ತು. ಪದೇ ಪದೇ ನಿಂದನೆಗಳು ಮತ್ತು ಟೀಕೆಗಳ,ವಿಶೇಷವಾಗಿ ಕೆಲವು ಕುಟುಂಬ ಸದಸ್ಯರಿಂದ,ಹೊರತಾಗಿಯೂ ನಾನು ಅವಳಿಗೆ ಬೆಂಬಲವಾಗಿ ನಿಂತಿದ್ದೆ. ನನ್ನ ಈ ಎಲ್ಲ ವರ್ಷಗಳ ಹೋರಾಟ ಅಂತಿಮವಾಗಿ ಸಾರ್ಥಕಗೊಂಡಿದೆ ಎಂದು ಈಗ ಅನಿಸುತ್ತಿದೆ ’ ಎಂದು ಹೆಮ್ಮೆಯಿಂದ ರೋಶನ್(48) ಹೇಳಿದರು.

ಮೂಲತಃ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ದರ್ಶನಾಳ ಗ್ರಾಮದ ಮಕಾನ್ದಾರ್ ಕುಟುಂಬ ಭೂರಹಿತ ಕಾರ್ಮಿಕರಾಗಿದ್ದು,ಇತರರ ಜಮೀನಿನಲ್ಲಿ ದುಡಿಯುತ್ತಿದ್ದರು. 1993ರಲ್ಲಿ ರೋಷನ್ ಮತ್ತು ಅವರ ಪತ್ನಿ ಸಾಯಿರಾಬಾನು ಹೊಸ ಬದುಕನ್ನು ಅರಸಿಕೊಂಡು ಪುಣೆಗೆ ವಲಸೆ ಬಂದಿದ್ದರು. ‘ಆದರೆ ತ್ಯಾಜ್ಯವನ್ನು ಆಯುವ ಮತ್ತು ತ್ಯಾಜ್ಯ ಮರುಬಳಕೆಯ ಕೆಲಸವಷ್ಟೇ ನಮಗಾಗಿ ತೆರೆದುಕೊಂಡಿತ್ತು’ ಎಂದು ಕೇವಲ ಐದನೇ ತರಗತಿವರೆಗೆ ಓದಿರುವ ರೋಷನ್ ನೆನಪಿಸಿಕೊಂಡರು.

ರೋಷನ್-ಸಾಯಿರಾಬಾನು ದಂಪತಿಯ ಮಕ್ಕಳಲ್ಲಿ ಹಿರಿಯವಳಾಗಿರುವ ಶಾಯದಾ ಸ್ವರಾಜ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿನಿಯಾಗಿದ್ದರೆ,ಸೋದರರಾದ ಅಲ್ತಾಫ್ ಮತ್ತು ಇಮ್ರಾನ್ ಅನುಕ್ರಮವಾಗಿ 11 ಮತ್ತು 10ನೇ ತರಗತಿಗಳಲ್ಲಿ ಓದುತ್ತಿದ್ದಾರೆ. 

ತನ್ನ ಸಾಧನೆಗೆ ತಂದೆಯ ನಿರಂತರ ಬೆಂಬಲದ ಜೊತೆಗೆ ತ್ಯಾಜ್ಯ ಆಯುವವರ ಕಾರ್ಮಿಕ ಒಕ್ಕೂಟ ಹಾಗೂ ಪೊಲೀಸ್ ನೇಮಕಾತಿ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿರುವ ಪುಣೆಯ ದಿ ನ್ಯೂ ಮಹಾರಾಷ್ಟ್ರ ಅಕಾಡಮಿಯ ನೆರವೂ ಕಾರಣವಾಗಿದೆ ಎಂದು ಶಾಯದಾ ಹೇಳಿದರು.

12ನೇ ತರಗತಿಯ ಪರೀಕ್ಷೆಯಲ್ಲಿ ಶೇ.82ರಷ್ಟು ಅಂಕಗಳನ್ನು ಗಳಿಸಿದ್ದ ಶಾಯದಾಗೆ ಪುಣೆ ಮಹಾನಗರ ಪಾಲಿಕೆಯು 25,000 ರೂ.ಗಳ ನಗದು ಬಹುಮಾನವನ್ನು ನೀಡಿತ್ತು. ಆ ಹಣ ಶಾಯದಾರ ವ್ಯಾಸಂಗ ಮತ್ತು ಪೊಲೀಸ್ ನೇಮಕಾತಿಗೆ ತರಬೇತಿ ಪಡೆಯಲು ನೆರವಾಗಿತ್ತು.

ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳಲು ಪೊಲೀಸ್ ಸಿಬ್ಬಂದಿ ಸೂರಜ ಖದರೆ ಅವರ ಮಾರ್ಗದರ್ಶನವನ್ನೂ ಶಾಯದಾ ಸ್ಮರಿಸಿಕೊಂಡರು.

ಉದ್ಯೋಗದಲ್ಲಿದ್ದೇ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಉದ್ದೇಶಿಸಿರುವ ಶಾಯದಾ ಬಡ್ತಿಗಳಿಗಾಗಿ ಇಲಾಖಾ ಪರೀಕ್ಷೆಗಳನ್ನು ಬರೆಯುವ ಆಶಯವನ್ನೂ ಹೊಂದಿದ್ದಾರೆ. ಸಾಧ್ಯವಾದಷ್ಟು ಶೀಘ್ರ ಅಪಾರ್ಟ್ಮೆಂಟ್ವೊಂದಕ್ಕೆ ತನ್ನ ಕುಟುಂಬವನ್ನು ಸ್ಥಳಾಂತರಿಸುವುದು ತನ್ನ ಕನಸಾಗಿದೆ ಎಂದು ಅವರು ಹೇಳಿದರು.

‘ಶಾಯದಾ ತನ್ನ ಕನಸನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂದುವರಿಯಲು ಅವಕಾಶ ನೀಡಿದ್ದಕ್ಕಾಗಿ ಜನರು ನನ್ನನ್ನು ಹಂಗಿಸಿದ್ದರು. ಆದರೆ ಈ ವಾರಾಂತ್ಯದಲ್ಲಿ ಅವರೆಲ್ಲ ಆಕೆಯನ್ನು ಅಭಿನಂದಿಸಲು ಮನೆಗೆ ಬಂದಾಗ ನನ್ನ ಕಣ್ಣೀರನ್ನು ತಡೆದುಕೊಳ್ಳಲು ನನಗೆ ಸಾಧ್ಯವಾಗಲಿಲ್ಲ’ ಎಂದು ರೋಷನ್ ಹೇಳಿದರು.

share
Next Story
X