ಇಂದ್ರಾಳಿ: ಅಪಾಯಕ್ಕೆ ಆಹ್ವಾನಿಸುತ್ತಿರುವ ರೈಲ್ವೆ ಸೇತುವೆ

ಉಡುಪಿ, ಮೇ 24: ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿಯ ರೈಲ್ವೆ ಸೇತುವೆ ಬಳಿ ತಾತ್ಕಾಲಿಕ ರಸ್ತೆ ವಿಭಾಜಕವಾಗಿ ಬ್ಯಾರಿಕೆಟ್ ಅಳವಡಿಸಲಾಗಿದ್ದು, ಅದರಲ್ಲಿದ್ದ ತಗಟು ಕಿತ್ತು ಹೊರಕ್ಕೆ ಬಂದು ನೇತಾಡುವ ಮೂಲಕ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಒಂದೆಡೆ ಇಲ್ಲಿ ದಾರಿದೀಪದ ವ್ಯವಸ್ಥೆ ಇಲ್ಲ. ಹೊಸ ಸೇತುವೆ ಆಗಿಲ್ಲ. ವಾಹನ ದಟ್ಟಣೆ ಬಹಳವಿರುತ್ತದೆ. ವಾಹನ ಚಲಿಸುವಾಗ ಇಲ್ಲಿ ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ಜಿಲ್ಲಾಡಳಿತವು ತಕ್ಷಣ ಸಮಸ್ಯೆಯನ್ನು ಪರಿಶೀಲಿಸಿ ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.
Next Story





