ಬನ್ನಂಜೆ ಶಿವಗಿರಿ ಸಭಾಭವನದಲ್ಲಿ ತಾಳಮದ್ದಲೆಗೆ ಚಾಲನೆ

ಉಡುಪಿ, ಮೇ 24: ಉಡುಪಿ ಯಕ್ಷಗಾನ ಕಲಾರಂಗದ ವತಿಯಿಂದ ತಾಳಮದ್ದಲೆ ಸಪ್ತಾಹದ ಅಂಗವಾಗಿ 3ನೇ ದಿನ ಬನ್ನಂಜೆ ಶ್ರೀಶಿವಗಿರಿ ಸಭಾ ಭವನದಲ್ಲಿ ತಾಳಮದ್ದಲೆ ಕಾರ್ಯಕ್ರಮ ಜರಗಿತು.
ಹರ್ಷ ಸಮೂಹಸಂಸ್ಥೆಯ ಮುಖ್ಯಸ್ಥ ಸೂರ್ಯಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬನ್ನಂಜೆ ಬಿಲ್ಲವರ ಸೇವಾ ಸಂಘದ ಕಾರ್ಯದರ್ಶಿ ಆನಂದ ಪೂಜಾರಿ ಹಾಗೂ ಕಲಾರಂಗದ ಉಪಾಧ್ಯಕ ರಾದ ಎಸ್.ವಿ.ಭಟ್, ಕಿಶನ್ ಹೆಗ್ಡೆ, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು. ಗಣೇಶ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿ ದರು. ನಂತರ ತಾಳಮದ್ದಲೆ ವಾಮನ ಚರಿತ್ರೆ ಪ್ರಸ್ತುತಗೊಂಡಿತು.
Next Story





