ತರೀಕೆರೆ ಮೂಲದ ಎನ್‍ಎಸ್‍ಜಿ ಕಮಾಂಡೋ ಅಪಘಾತದಲ್ಲಿ ಮೃತ್ಯು

ಚಿಕ್ಕಮಗಳೂರು, ಮೇ 24: ರಜೆ ಮೇಲೆ ಹುಟ್ಟೂರಿಗೆ ಆಗಮಿಸಿದ್ದ ಎನ್‍ಎಸ್‍ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ವರದಿಯಾಗಿದೆ.
ತರೀಕೆರೆ ತಾಲೂಕಿನ ತಣಿಗೆಬೈಲ್ ಗ್ರಾಮದ ನಿವಾಸಿಯಾದ ದೀಪಕ್(22) ಮೃತ ಯೋಧನಾಗಿದ್ದು, ಭಾರತೀಯ ಸೇನೆಯಲ್ಲಿ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು ಇತ್ತೀಚೆಗೆ ಎನ್‍ಎಸ್‍ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಆಗಿ ನೇಮಕಗೊಂಡಿದ್ದರು. ಈ ನೇಮಕಾತಿ ಆದ ಬಳಿಕ ಮೊದಲ ಬಾರಿಗೆ 1 ತಿಂಗಳ ರಜೆ ಮೇಲೆ ಆಗಮಿಸಿದ್ದ ಅವರು, ಬುಧವಾರ ಮುಂಜಾನೆ ಬೈಕ್‍ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು. ಆದರೆ ಮಾರ್ಗ ಮಧ್ಯೆ ಬೆಂಗಳೂರು ಸಮೀಪದಲ್ಲಿ ಸಂಭವಿಸಿದ ಅಪಘಾತದಲ್ಲಿ ದೀಪಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ಮೃತ ದೀಪಕ್ ಪತ್ನಿ, ಪೋಷಕರು ಹಾಗೂ ಅಪಾರ ಸಂಬಂಧಿಗಳನ್ನು ಅಗಲಿದ್ದಾರೆ.
Next Story





