ಚಿನ್ನಾಭರಣ ಕಳವು: ಪ್ರಕರಣ ದಾಖಲು

ಮಂಗಳೂರು: ನಗರ ಹೊರವಲಯದ ಅಶೋಕನಗರದ ಬಾಡಿಗೆ ಮನೆಯೊಂದರಿಂದ ಚಿನ್ನಾಭರಣ ಕಳವುಗೈದ ಘಟನೆಯ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನಿತಾ ಎಂಬಾಕೆ ಮೇ 16ರಂದು ಪೂ.11ಕ್ಕೆ ತನ್ನ ಮನೆಗೆ ಬೀಗ ಹಾಕಿ ಆಸ್ಪತ್ರೆಯಲ್ಲಿರುವ ತನ್ನ ತಾಯಿಯನ್ನು ನೋಡಿಕೊಂಡು ಬರಲು ಹೋಗಿ ಅದೇ ದಿನ ರಾತ್ರಿ 10ಕ್ಕೆ ವಾಪಸಾಗಿದ್ದರು. ಮೇ 18ರಂದು ಸಂಜೆ ಚಿನ್ನಾಭರಣವಿಡುವ ಕಬ್ಬಿಣದ ಕಪಾಟಿನ ಬಾಗಿಲು ತೆರೆದು ನೋಡಿದಾಗ ಅದರಲ್ಲಿದ್ದ 32 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, ಮಗುವಿನ ಚಿನ್ನದ ಉಂಗುರಗಳು, ಪೆಂಡೆಂಟ್ ಸಹಿತ 41 ಗ್ರಾಂ ತೂಕದ 2.29 ಲ.ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





