ಅಬುಧಾಬಿಯಲ್ಲಿ ಕರಾಟೆ: ಉಡುಪಿಯ ಸಯೀದ್‌ಗೆ ಪದಕ

ಉಡುಪಿ, ಮೇ 24: ಅಬುಧಾಬಿ ವಿನ್ನರ್ ಕರಾಟೆ ಕ್ಲಬ್ ವತಿಯಿಂದ ಮೇ 21ರಂದು ಅಬುಧಾಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧಾ ಕೂಟದಲ್ಲಿ ಕಾಪು ಚಂದ್ರನಗರ ಕ್ರೆಸೆಂಟ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿ ಮುಹಮ್ಮದ್ ಸಯೀದ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಇವರು ಉಡುಪಿಯ ಅಬ್ದುಲ್ ನಜೀರ್ ಮತ್ತು ಶಾಹಿನ್ ಬಾನು ದಂಪತಿ ಪುತ್ರ. ಸ್ಪರ್ಧಾಕೂಟಕ್ಕೆ ಒಲಿಂಪಿಕ್ಸ್ ಗೇಮ್ಸ್ ರೆಫರಿ, ವರ್ಲ್ಡ್ ಕರಾಟೆ ಫೆಡರೇಶನ್ ರೆಫ್ರಿ ರೆಂಚಿ ಪರಮಜೀತ್ ಸಿಂಗ್ ಮುಖ್ಯ ತೀರ್ಪುಗಾರರಾಗಿದ್ದರು. ಜಪಾನ್ ಶೋಟೊಕಾನ್ ಕರಾಟೆ ಕನ್ನಿಂಜುಕು ಆರ್ಗನೈಝೇಶನ್ ಇಂಡಿಯಾದ ಕರ್ನಾಟಕ ರಾಜ್ಯ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕ ಶಂಶುದ್ದೀನ್ ಎಚ್.ಶೇಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
Next Story