ಬ್ರಹ್ಮಾವರ: ಜಾರ್ಖಂಡ್ ಮೂಲಕ ಮಹಿಳೆ ಆತ್ಮಹತ್ಯೆ

ಬ್ರಹ್ಮಾವರ, ಮೇ 24: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನೀಲಾವರ ಎಂಬಲ್ಲಿ ಮೇ 23ರಂದು ರಾತ್ರಿ 9ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಅಲೀಕಾ ದೇವಿ (25) ಎಂದು ಗುರುತಿಸಲಾಗಿದೆ. ಇವರು ನೀಲಾವರ ಗ್ರಾಮದ ಪೀಟರ್ ಡಿಸೋಜ ಎಂಬವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯ ಸೇವಿಸುತ್ತಿದ್ದ ಪತಿ ಹಾಗೂ ಜಾರ್ಖಂಡ್ ನಲ್ಲಿರುವ ಮಗಳನ್ನು ನೋಡಲು ಆಗುವುದಿಲ್ಲ ಎಂಬ ಚಿಂತೆಯಲ್ಲಿ ಮಾನಸಿಕ ವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ತೋಟದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story