ಐಪಿಎಲ್ ಎಲಿಮಿನೇಟರ್: ಆಕಾಶ್ ಬೌಲಿಂಗ್ ದಾಳಿಗೆ ತತ್ತರಿಸಿದ ಲಕ್ನೋ; ಮುಂಬೈಗೆ ಭರ್ಜರಿ ಜಯ

ಚೆನ್ನೈ: ಇಲ್ಲಿನ ಎಮ್.ಎ. ಚಿದಂಬರಮ್ ಸ್ಟೇಡಿಯಮ್‍ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಎಲಿಮಿನೇಟರ್ ಪಂದ್ಯದಲ್ಲಿ ಬುಧವಾರ ಲಕ್ನೋ ಸೂಪರ್ ಜಯಂಟ್ಸ್ (LSG) ವಿರುದ್ಧ ಮುಂಬೈ ಇಂಡಿಯನ್ಸ್ 81 ರನ್ ಜಯ ಗಳಿಸಿದೆ. ಆಕಾಶ್ ಮಧ್ವಾಲ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಲಕ್ನೋ 101 ರನ್ ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ನಿರ್ಗಮಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ಲಕ್ನೋ ತಂಡದ ನವೀನುಲ್ ಹಕ್‍ರ ಆರಂಭಿಕ ಆಘಾತಕ್ಕೆ ನಲುಗಿದರೂ, ಇನಿಂಗ್ಸ್ ಕೊನೆಯಲ್ಲಿ ಚೇತರಿಸಿಕೊಂಡ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ ಸ್ಪರ್ಧಾತ್ಮಕ 182 ರನ್‍ಗಳನ್ನು ಗಳಿಸಿತು. ಕ್ಯಾಮರೂನ್ ಗ್ರೀನ್ 23 ಎಸೆತಗಳಲ್ಲಿ 41 ರನ್ ಗಳಿಸಿದರು ಮತ್ತು ಸೂರ್ಯಕುಮಾರ್ ಯಾದವ್ 20 ಎಸೆತಗಳಲ್ಲಿ 33 ರನ್‍ಗಳನ್ನು ನೀಡಿದರು.
ಗುರಿ ಬೆನ್ನಟ್ಟಿದ ಲಕ್ನೋ ತಂಡ ಆಕಾಶ್ ಮಧ್ವಾಲ್ ಅವರ ಬೌಲಿಂಗ್ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು. ಆಕಾಶ್ 5 ವಿಕೆಟ್ ಪಡೆದು ಮಿಂಚಿದರು. ಲಕ್ನೋ ಪರ ಮಾರ್ಕಸ್ ಸ್ಟೋನಿಸ್ 40 ರನ್ ಗಳಿಸಿದರು.