ಬೆಂಗಳೂರು | ಸುಳ್ಳು ಪ್ರಕರಣ ದಾಖಲಿಸಿದ ಆರೋಪ; ದಯಾಮರಣ ಕೋರಿದ ಆಟೊ ಚಾಲಕ

ಬೆಂಗಳೂರು, ಮೇ 25: ಪೊಲೀಸ್ ಸಿಬ್ಬಂದಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಆಟೊ ಚಾಲಕನೋರ್ವ, ತನಗೆ ದಯಾಮರಣ ನೀಡಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಆಟೊ ಚಾಲಕಹರ್ಷ ಎಂಬಾತ ದಯಾಮರಣ ಕೋರಿ ಪತ್ರ ಬರೆದಿದ್ದು, ಕಳೆದ ವರ್ಷ ಪತ್ನಿ ವರದಕ್ಷಿಣೆ ಕಿರುಕುಳ ಆರೋಪದಡಿ ತನ್ನ ಹಾಗೂ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಮಹಿಳಾ ಠಾಣೆ ಇನ್ ಸ್ಪೆಕ್ಟರ್ ಹಾಗೂಸಿಬ್ಬಂದಿಸರಿಯಾಗಿ ತನಿಖೆ ಕೈಗೊಂಡಿಲ್ಲ. ಪೊಲೀಸರ ಕೃತ್ಯದಿಂದನಾವುಸಾಲಪಡೆದು ಜಾಮೀನುಪಡೆದಿದ್ದೇವೆ. ಪುನಃ ಸಾಲಪಡೆದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಚೇರಿಗೆ ಅಲೆದಾಡುತ್ತಿದ್ದೇವೆ ಎಂದಿದ್ದಾರೆ.
6 ತಿಂಗಳಿನಿಂದ ನನ್ನ ಕೆಲಸವೂ ಹಾಳಾಗಿದೆ. ಸಾಲ ಕೊಟ್ಟವರು ವಾಪಸ್ ಕೇಳುತ್ತಿದ್ದಾರೆ.ನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಆದೇಶಿಸಿ, ಬಸವನಗುಡಿ ಮಹಿಳಾ ಠಾಣೆಯ ಅಂದಿನ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮತ್ತು ನನ್ನ ಸಾಲವನ್ನು ಅವರುಗಳಿಂದಲೇ ಕಟ್ಟಿಸಿ ಕೊಡಿ. ಇಲ್ಲವಾದಲ್ಲಿ ದಯಾಮರಣ ನೀಡಿ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.