‘ನೀರಾವರಿ ಕಾಮಗಾರಿ’ಗಳ ಟೆಂಡರ್ ಸ್ಥಗಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

ಬೆಂಗಳೂರು, ಮೇ 25: ರಾಜ್ಯದಲ್ಲಿ ಈ ಹಿಂದಿನ ಸರಕಾರದ ಅವಧಿಯಲ್ಲಿ ಅನೇಕ ನೀರಾವರಿ ಕಾಮಗಾರಿಗಳು ಹಣಕಾಸಿನ ಸೂಕ್ತ ಅನುದಾನವಿಲ್ಲದಿದ್ದರೂ ಕಾಮಗಾರಿಗಳ ಟೆಂಡರ್‍ಗಳನ್ನು ಕರೆಯಲಾಗಿತ್ತು. ಇವುಗಳನ್ನು ಸೂಕ್ತವಾಗಿ ಪರಿಶೀಲಿಸಬೇಕಾಗಿರುವುದರಿಂದ ಮುಂದಿನ ಆದೇಶದ ವರೆಗೆ ಪ್ರಾರಂಭ ಆಗದಿರುವ ಕಾಮಗಾರಿಗಳನ್ನು ಹಾಗೂ ಈಗಾಗಲೆ ಕರೆದಿರುವ ಟೆಂಡರ್‍ಗಳನ್ನು ಸ್ಥಗಿತಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ನೀರಾವರಿ ಇಲಾಖೆಯ ನಿಗಮಗಳಾದ ವಿಜೆಎನ್‍ಎಲ್, ಕೆಎನ್‍ಎನ್‍ಎಲ್, ಸಿಎನ್‍ಎನ್‍ಎಲ್, ಕೆಬಿಜೆಎನ್‍ಎಲ್, ಇಂಧನ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಜಲ ಜೀವನ್ ಮಿಷನ್ ಕರಾರು ಪತ್ರ ಆಗಿದೆ. ಹಣಕಾಸಿನ ತೊಂದರೆಯಿಂದ ಹಾಗೂ ಭೂ ಸ್ವಾಧೀನ ತೊಂದರೆಯಿಂದ ಹೊಸದಾಗಿ ತರಾತುರಿಯಲ್ಲಿ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಕರೆದಿರುವ ಟೆಂಡರ್ ಗಳಿಗೆ ಸುಮಾರು 20 ಸಾವಿರ ಕೋಟಿ ರೂ.ಗಳ ಅನುಮೋದನೆ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಈ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂದು ವ್ಯಾಪಕ ದೂರುಗಳಿವೆ. ಕೆಲವು ಕಾಮಗಾರಿಗಳಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ದೂರುಗಳು ಇವೆ. ಇವುಗಳನ್ನು ಸೂಕ್ತವಾಗಿ ಪರಿಶೀಲಿಸಬೇಕಾಗಿರುವುದರಿಂದ ಮುಂದಿನ ಆದೇಶದ ವರೆಗೆ ಪ್ರಾರಂಭ ಆಗದಿರುವ ಕಾಮಗಾರಿಗಳನ್ನು ಹಾಗೂ ಈಗಾಗಲೆ ಕರೆದಿರುವ ಟೆಂಡರ್‍ಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.