ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ದಿಲ್ಲಿಯ ಮಂಡೋಲಿ ಜೈಲಿಗೆ ವರ್ಗಾವಣೆ
ಹೊಸದಿಲ್ಲಿ, ಮೇ 25: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಗುಜರಾತ್ ಜೈಲಿನಿಂದ ದಿಲ್ಲಿಗೆ ಗುರುವಾರ ಕರೆ ತರಲಾಗಿದೆ. ಆತನನ್ನು ದಿಲ್ಲಿಯ ಮಂಡೋಲಿ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಕಾರಣಕ್ಕೆ ಬಿಷ್ಣೋಯಯನ್ನು ಮಂಡೋಲಿ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ತಿಹಾರ್ ಕಾರಾಗೃಹದಲ್ಲಿ ತಿಲ್ಲು ತಾಜ್ಪುರಿಯಾ ಹತ್ಯೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಗ್ಯಾಂಗ್ವಾರ್ ಸಂಭವಿಸುವುದನ್ನು ತಡೆಯಲು ಬಿಷ್ಣೋಯಿಯನ್ನು ಪ್ರತ್ಯೇಕ ಕಾರಾಗೃಹದಲ್ಲಿ ಇರಿಸುವ ನಿರ್ಧಾರವನ್ನು ಕಾರಾಗೃಹದ ಅಧಿಕಾರಿಗಳು ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.
ಗ್ಯಾಂಗ್ಸ್ಟರ್ ಬಿಷ್ಣೋಯಿಯನ್ನು ಬಿಗಿ ಭದ್ರತೆಯಲ್ಲಿ ಗುಜರಾತ್ನಿಂದ ದಿಲ್ಲಿಗೆ ಮುಂಜಾನೆ 12.30ಕ್ಕೆ ತರಲಾಗಿದೆ. ಅಲ್ಲದೆ, ಆತನನ್ನು ಮಂಡೋಲಿ ಕಾರಾಗೃಹದ ಸೆಲ್ ಸಂಖ್ಯೆ 15ರಲ್ಲಿ ಇರಿಸಲಾಗದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Next Story