ಕಡಬ: ಸೇತುವೆ ಮೇಲೆ ಕಾರು ನಿಲ್ಲಿಸಿ ಉದ್ಯಮಿ ಆತ್ಮಹತ್ಯೆ

ಕಡಬ, ಮೇ 26: ಉದ್ಯಮಿಯೋರ್ವರು ಕುಮಾರಧಾರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಅಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಆಲಂಕಾರಿನ ದುರ್ಗಾಂಬಾ ಜನರಲ್ ಸ್ಟೋರ್ ನ ಮಾಲಕ, ಮೂರ್ತೆದಾರದ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಚಂದ್ರಶೇಖರ ಪೂಜಾರಿ ಎಂದು ಗುರುತಿಸಲಾಗಿದೆ.
ಇಂದು ಮುಂಜಾನೆ ಶಾಂತಿಮೊಗರು ಸೇತುವೆಯ ಮೇಲೆ ತನ್ನ ಕಾರನ್ನು ನಿಲ್ಲಿಸಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story