ಉಳ್ಳಾಲ: ಸ್ಪೀಕರ್ ಯು.ಟಿ ಖಾದರ್ ಉಳ್ಳಾಲ ದರ್ಗಾ ಭೇಟಿ
ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಮತ್ತು ಉಳ್ಳಾಲ ಸಾವಿರ ಜಮಾಅತ್ ವತಿಯಿಂದ ಸನ್ಮಾನ

ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಮತ್ತು ಉಳ್ಳಾಲ ಸಾವಿರ ಜಮಾಅತ್ ವತಿಯಿಂದ ಸನ್ಮಾನ
ಉಳ್ಳಾಲ:ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ನೇಮಕಗೊಂಡಿರುವ ಯು.ಟಿ ಖಾದರ್ ರವರು ಇತಿಹಾಸ ಪ್ರಸಿದ್ದ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಂದರ್ಶಿಸಿ ಝಿಯಾರತ್ ನೆರವೇರಿಸಿದರು.
ಉಳ್ಳಾಲ ದರ್ಗಾ ಕಛೇರಿಯಲ್ಲಿ ದರ್ಗಾ ಅಧ್ಯಕ್ಷ ಬಿ.ಜಿ ಹನೀಫ್ ಹಾಜಿ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿಯವರು ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರವರನ್ನು ಸ್ವಾಗತಿಸಿದರು.
ಉಳ್ಳಾಲ ದರ್ಗಾ ಸಮಿತಿ ಹಾಗೂ ಉಳ್ಳಾಲ ಸಾವಿರ ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ನಾಝಿಮ್ ರಹ್ಮಾನ್, ಜೊತೆ ಕಾರ್ಯದರ್ಶಿ ಇಸಾಕ್ ಮತ್ತು ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Next Story