3 ವರ್ಷಗಳವರೆಗೆ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ರಾಹುಲ್ ಗಾಂಧಿಗೆ ಅನುಮತಿ ನೀಡಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ(Congress leader Rahul Gandhi) ಮೂರು ವರ್ಷದ ತನಕ ಸಾಮಾನ್ಯ ಪಾಸ್‌ಪೋರ್ಟ್ ಪಡೆಯಲು ದಿಲ್ಲಿ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ ಎಂದು NDTV ವರದಿ ಮಾಡಿದೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಿದ ನಂತರ ರಾಹುಲ್ ಗಾಂಧಿ ಸಾಮಾನ್ಯ ಪಾಸ್‌ಪೋರ್ಟ್ ನೀಡಿಕೆಗೆ ಅಗತ್ಯವಿರುವ ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ನಾನು ನಿಮ್ಮ ಅರ್ಜಿಯನ್ನು ಭಾಗಶಃ ಅನುಮತಿಸುತ್ತಿದ್ದೇನೆ. 10 ವರ್ಷಗಳ ಕಾಲ ಅಲ್ಲ, ಆದರೆ ಮೂರು ವರ್ಷಗಳ ತನಕ ”ಎಂದು ನ್ಯಾಯಾಧೀಶರು ರಾಹುಲ್ ಗಾಂಧಿಯವರ ವಕೀಲರಿಗೆ ತಿಳಿಸಿದರು.
Next Story