ತುಂಬೆಯಲ್ಲಿ ನೀರಿನ ಮಟ್ಟ ಇಳಿಕೆ: ಮನಪಾ ಸಭೆಯಲ್ಲಿ ಕಳವಳ

ಮಂಗಳೂರು: ಮನಪಾ ಕುಡಿಯುವ ನೀರಿನ ಮೂಲವಾದ ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿರುವುದು ಮತ್ತು ಮುಂಗಾರು ಮಳೆ ವಿಳಂಬವಾಗುವ ಸಾಧ್ಯತೆ ಇರುವ ಕಾರಣ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಗಬಹುದು ಎಂದು ಪ್ರತಿಪಕ್ಷ ಗಳ ಸದಸ್ಯರು ಸಭೆಯಲ್ಲಿ ಕಳವಳ ವ್ಯಕ್ತ ಪಡಿಸಿದ್ದಾರೆ.
ಮೇಯರ್ ಜಯಾನಂದ ಅಂಚನ್ ರವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಪರಿಷತ್ತಿನ ಸಾಮಾನ್ಯ ಸಭೆ ನಡೆಯಿತು.
ಈ ಬಗ್ಗೆ ವಿವರಣೆ ನೀಡಿದ ಮನಪಾ ಆಯು ಕ್ತ ಚೆನ್ನಬಸಪ್ಪ ಮಾತನಾಡುತ್ತಾ,ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ 2.8 ಮೀಟರ್ ಕೆಳಗೆ ಕುಸಿದಿದೆ.ಪ್ರತಿದಿನ 160 ಎಂಎಲ್ ಡಿ ನೀರು ಬಳಕೆಯಾಗುತ್ತದೆ. ತುಂಬೆಯ ಅಣೆಕಟ್ಟಿನ ಕೆಳಗೆ ಅಡ್ಯಾರ್ ಡ್ಯಾಂ ವರೆಗೆ ಸಂಗ್ರಹವಾಗುವ ನೀರನ್ನು ಸಂಗ್ರಹಿಸಿ ಪ್ರತಿದಿನ 50ರಿಂದ 60 ಎಂಎಲ್ ಡಿ ನೀರನ್ನು ತುಂಬೆ ಅಣೆಕಟ್ಟಿಗೆ ತುಂಬಿಸಲಾಗುತ್ತಿದೆ. ಎ.ಎಂ.ಆರ್ ಡ್ಯಾಂ ಗೆ ನೇತ್ರಾವತಿ ಕುಮಾರ ಧಾರ ನದಿಗಳಿಂದ ಒಳ ಹರಿವು ಆರಂಭ ಆಗಿರುವುದರಿಂದ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗುತ್ತದೆ .ಸದ್ಯ ಎರಡು ದಿನಗಳಿ ಗೊಮ್ಮೆ ರೇಷನಿಂಗ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಸದ್ಯ ಯಥಾಸ್ಥಿತಿ ಯಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ ಒಂದು ವಾರ ನೀರಿನ ಪೂರೈಕೆ ಗೆ ಸಮಸ್ಯೆ ಇಲ್ಲ ಎಂದು ಮನಪಾ ಆಯುಕ್ತ ಚನ್ನಬಸಪ್ಪ ಸಭೆಗೆ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಮನಪಾ ಪ್ರತಿ ಪಕ್ಷದ ನಾಯಕ ನವೀನ್ ಡಿ ಸೋಜ, ಸದಸ್ಯ ರಾದ ಅಬ್ದುಲ್ ರವೂಫ್, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಶಶಿಧರ್ ಹೆಗ್ಡೆ, ಲ್ಯಾನ್ಸಿಲಾಟ್ ಪಿಂಟೊ, ಅನಿಲ್ ಕುಮಾರ್, ಭಾಸ್ಕರ ಮೊಯ್ಲಿ, ಶಂಶಾದ್ ಅಬೂಬಕ್ಕರ್ ನೀರಿನ ಸಮಸ್ಯೆ ಗೆ ಬಗ್ಗೆ ಧ್ವನಿ ಗೂಡಿಸಿದರು.
ನೀರಿನ ರೇಷನಿಂಗ್ ಆರಂಭವಾದ ಬಳಿಕ ಎತ್ತರ ಪ್ರದೇಶಗಳಿಗೆ ನೀರು ಪೂರೈಕೆ ಸಮಸ್ಯೆ ಆಗುತ್ತಿದೆ ಇಂತಹ ಪ್ರದೇಶದಲ್ಲಿ ಹೆಚ್ಚು ವರಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಮಳೆ ಗಾಲದಲ್ಲಿ ಕೃತಕ ನೆರೆ ಹಾಗೂ ಪ್ರಾಕೃತಿಕ ವಿಕೋಪ ತಡೆಗೆ ಯಾವ ಕ್ರಮ ಕೈ ಗೊಳ್ಳಲಾಗಿದೆ ಎಂದು ವಿಪಕ್ಷ ನಾಯಕ ನವೀನ್ ಡಿ ಸೋಜ ಪ್ರಶ್ನಿಸಿದರು. ಈ ವಿಷಯದ ಬಗ್ಗೆ ಸಭೆಗೆ ಆಯುಕ್ತ ರು ಉತ್ತರ ನೀಡುತ್ತಾ ಪ್ರತಿ ವಾರ್ಡ್ ಗಳಲ್ಲಿ ಮುಂಜಾಗ್ರತೆಗಾಗಿ ತಂಡ ರಚಿಸಲಾಗಿದೆ. 11ರಾಜ ಕಾಲುವೆಗಳ ಹಾಗೂ ಸಣ್ಣ ಕಾಲುವೆ ಗಳ ಹೂಳೆತ್ತುವ ಕೆಲಸ ಬಹುತೇಕ ಪೂರ್ಣ ಗೊಂಡಿದೆ. ಮನಪಾ ವ್ಯಾಪ್ತಿಯಲ್ಲಿ 41 ಪ್ರದೇಶದಲ್ಲಿ ಕೃತಕ ನೆರೆ ಉಂಟಾಗುತ್ತದೆ. ಈ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ರಾಜ ಕಾಲುವೆ ಒತ್ತುವರಿ ಯಾಗಿರುವ ಪ್ರದೇಶದಲ್ಲಿ ಅಕ್ರಮ ಸ್ವಾಧೀನ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು.
ಆಡಳಿತ ಪಕ್ಷದ ಮಹಿಳಾ ಸದಸ್ಯರ ಪ್ರತಿಭಟನೆ:- ಸೈಕ್ಲಿಂಗ್ ಪಥ ನಿರ್ಮಾಣಕ್ಕೆ ಸಂಬಂಧಿ ಸಿದಂತೆ ಅತ್ತಾವರ ಮೆಸ್ಕಾಂ ಮುಂಭಾಗದಿಂದ ಕೆ.ಎಂ.ಸಿ ಅತ್ತಾವರ ವರೆಗೆ ಅಗತ್ಯ ವಿರುವ ಸ್ಥಳ ವನ್ನು ಸ್ಥಳವನ್ನು ಸ್ಮಾರ್ಟ್ ಸಿಟಿಗೆ ಹಸ್ತಾಂತರಿಸುವ ಬಗ್ಗೆ ಬಂದ ಪತ್ರ ದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಸಚೇತಕ ಪ್ರೇಮಾನಂದ ಶೆಟ್ಟಿ ವಿಷಯ ಮಂಡಿಸಿದಾಗ ಆ ವಾರ್ಡ್ ನ ಸದಸ್ಯ ವಿನಯ ರಾಜ್ ಪ್ರಸ್ತಾವನೆ ಗೆ ವಿರೋಧ ವ್ಯಕ್ತ ಪಡಿಸುತ್ತಾ ಅಲ್ಲಿ ಸುಮಾರು 23ಬಡ ಕುಟುಂಬ ಗಳ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರಿಗೆ ಪುನರ್ವಸತಿ ಮಾಡದೆ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು ಎಂದು ಮೇಯರ್ ಬಳಿ ವಾದಿಸುತ್ತಿದ್ದರು.
ಈ ನಡುವೆ ಮಹಿಳಾ ಸದಸ್ಯ ರೊಬ್ಬರು ವಿನಯರಾಜ್ ರವರ ಮಾತಿನ ಮಧ್ಯೆ ಪ್ರವೇಶಿಸಿದಾಗ ನೀವು ವಿಷಯ ತಿಳಿದುಕೊಳ್ಳದೆ ಮಧ್ಯೆ ಪ್ರವೇಶ ಮಾಡಬೇಡಿ. ಇದು ಮನಪಾ ಸಭೆ ಅಡುಗೆ ಮನೆಯಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಆಡಳಿತ ಪಕ್ಷದ ಮಹಿಳಾ ಸದಸ್ಯರು ವಿನಯ ರಾಜ್ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಅವರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದಾಗ ಮನಪಾ ಸಭೆಯಲ್ಲಿ ಕೆಲಕಾಲ ಗೊಂದಲ ಸೃಷ್ಟಿ ಯಾಯಿತು. ಮನಪಾ ಕಾಂಗ್ರೆಸ್ ಪಕ್ಷದ ಮಹಿಳಾ ಸದಸ್ಯರು ವಿನಯ ರಾಜ್ ಪರ ನಿಂತರು. ಬಳಿಕ ವಿಪಕ್ಷ ನಾಯಕ ನವೀನ್ ಡಿಸೋಜಾ ಮನಪಾ ಮೇಯರ್ ಸಚೇತಕ ಪ್ರೇಮಾನಂದ ಶೆಟ್ಟಿ ಮಹಿಳಾ ಸದಸ್ಯೆಯರನ್ನು ಸಮಾಧಾನ ಪಡಿಸಿ ಸಭೆ ಮುಂದುವರಿಸಿದರು.
ಸಭೆಯ ವೇದಿಕೆಯಲ್ಲಿ ಉಪ ಮೇಯರ್ ಪೂರ್ಣಿಮಾ ಉಪಸ್ಥಿತರಿದ್ದರು.