ಮಂಗಳೂರು: ಸನದುದಾನ ಸಮಾರಂಭ

ಮಂಗಳೂರು: ಮಸ್ಜಿದ್ ಝೀನತ್ ಬಕ್ಷ್ ಬಂದರ್ ಮಂಗಳೂರು ಅಧೀನದಲ್ಲಿ ನಡೆಯುತ್ತಿರುವ ಅಶೈಖ್ ಅಸ್ಸೆಯ್ಯೆದ್ ಮುಹಮ್ಮದ್ ಮೌಲಾ ಜಲಾಲ್ ಮಸ್ತಾನ್ ಹಿಫ್ಳುಲ್ ಖುರ್‌ಆನ್ ಅರೇಬಿಕ್ ಕಾಲೇಜಿನಲ್ಲಿ 9ನೇ ಸನದುದಾನ ಸಮಾರಂಭ ನಡೆಯಿತು.
ಹಿಫ್ಲುಲ್ ಖುರ್‌ಆನ್ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಕುರ್‌ಆನ್ ಕಂಠಪಾಠ ಪೂರ್ತಿಗೊಳಿಸಿದ 10 ವಿದ್ಯಾರ್ಥಿಗಳಿಗೆ ಸನದುದಾನ ಮಾಡಲಾಯಿತು. ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿ ಅಧ್ಯಕ್ಷರಾದ ಯೆನೆಪೋಯ ಅಬ್ದಲ್ಲ ಕುಂಞಿ ಅದ್ಯಕ್ಷತೆ ವಹಿಸಿದ್ದರು.
ಉದ್ಘಾಟನೆ ಹಾಗೂ ಸನದುದಾನವನ್ನು ಸಂಸ್ಥೆಯ ಪ್ರಾಂಶುಪಾಲರು ಮತ್ತು ದ.ಕ ಜಿಲ್ಲಾ ಖಾಝಿಯವರಾದ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ಯವರು ನಿರ್ವಹಿಸಿದರು. ಮಸೀದಿಯ ಖತೀಬರಾದ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿಯವರು ಮುಖ್ಯಪ್ರಭಾಷಣ ನಡೆಸಿದರು, ಹಿಫ್ಳುಲ್ ಖುರ್‌ಆನ್ ಕಾಲೇಜು ಉಸ್ತಾದರಾದ ಹಾಫಿಳ್ ಮುಹಮ್ಮದ್ ಅಝ್ಹರುದ್ದೀನ್ ಅನ್ಸಾರಿ ದಿಕ್ಸೂಚಿ ಭಾಷಣ ಮಾಡಿದರು.
ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಮಸೀದಿ ಸದಸ್ಯರಾದ ಅದ್ದು ಹಾಜಿ, ಮುಹಮ್ಮದ್ ಅಶ್ರಫ್ ಹಳೆಮನೆ, ಅಬ್ದುಲ್ ಸಮದ್ ಹಾಜಿ, ಹಿಫ್ಳುಲ್ ಖುರ್‌ಆನ್ ಕಾಲೇಜು ಉಸ್ತಾದ್ ಹಾಫಿಳ್ ಮುಹಮ್ಮದ್ ಜುನೈದ್ ಅಝ್ಹರಿ ಉಪಸ್ಥಿತರಿದ್ದರು.