ಬಿಜೆಪಿಗರು ‘ಗ್ಯಾರಂಟಿ’ ಜಾರಿಗಾಗಿ ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ: ಕಾಂಗ್ರೆಸ್
''ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ''

ಬೆಂಗಳೂರು:ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿರುವ ಐದು ಭರವಸೆಗಳ ಬಗ್ಗೆ ಪ್ರಶ್ನಿಸುತ್ತಿರುವ ಬಿಜೆಪಿ ಕಾಂಗ್ರೆಸ್ ನ ಕಾಲೆಳೆಯುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆಗೆ ನಾವೂ ಭರವಸೆಗಳನ್ನು ಕೊಟ್ಟಿದ್ದೆವು. ಬಿಜೆಪಿಯೂ ಭರಪೂರ ಭರವಸೆಗಳನ್ನು ಕೊಟ್ಟಿತ್ತು. ಆದರೆ ಇಂದು ಬಿಜೆಪಿ, ಜನತೆ ಕಾಂಗ್ರೆಸ್ಸಿನ ಭರವಸೆಗಳಿಗೆ ಮತ ಹಾಕಿದ್ದಾರೆ ಎನ್ನುತ್ತಿದೆ. ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ, ಸುಳ್ಳಿನ ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ ಎನ್ನುವುದನ್ನು ಬಿಜೆಪಿ ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ ಎಂದು ಹೇಳಿದೆ.
''ನಾವು ನೀಡಿದ ಭರವಸೆಗಳನ್ನು ಈಡೇರಿಸುವುದು 'ಗ್ಯಾರಂಟಿ' ಆದರೆ ಬಿಜೆಪಿ ನಾಯಕರು ಚುನಾವಣೆಗೂ ಮೊದಲು ಉಚಿತ ಯೋಜನೆಗಳನ್ನ ನೀಡಬಾರದು, ಉಚಿತ ಕೊಟ್ಟರೆ ಶ್ರೀಲಂಕಾ ಆಗತ್ತೆ, ಪಾಕಿಸ್ತಾನ್ ಆಗತ್ತೆ ಎಂದು ವಿರೋಧಿಸಿದ್ದವರು ಇಂದು ಗ್ಯಾರಂಟಿ ಜಾರಿಗಾಗಿ ಪ್ರತಿಭಟಿಸುತ್ತೇವೆ ಎನ್ನುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಗರಿಗೆ ಒಂದೇ ನಿಲುವು ಇಲ್ಲದಿರುವುದೇಕೆ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಚುನಾವಣೆಗೆ ನಾವೂ ಭರವಸೆಗಳನ್ನು ಕೊಟ್ಟಿದ್ದೆವು. ಬಿಜೆಪಿಯೂ ಭರಪೂರ ಭರವಸೆಗಳನ್ನು ಕೊಟ್ಟಿತ್ತು.
— Karnataka Congress (@INCKarnataka) May 27, 2023
ಇಂದು @BJP4Karnataka ಜನತೆ ಕಾಂಗ್ರೆಸ್ಸಿನ ಭರವಸೆಗಳಿಗೆ ಮತ ಹಾಕಿದ್ದಾರೆ ಎನ್ನುತ್ತಿದೆ.
ಬಿಜೆಪಿಯ ಭರವಸೆಗಳನ್ನು ಜನತೆ ನಂಬಿಲ್ಲ, ಸುಳ್ಳಿನ ಬಿಜೆಪಿ ಮೇಲೆ ಜನತೆಗೆ ಭರವಸೆ ಉಳಿದಿಲ್ಲ ಎನ್ನುವುದನ್ನು ಬಿಜೆಪಿ ಪರೋಕ್ಷವಾಗಿ…