ಸಲ್ಮಾನ್ ಖಾನ್ ಅಂಗರಕ್ಷಕರು ತನ್ನನ್ನು ತಳ್ಳಿದ್ದಾರೆ ಎಂಬ ವಿವಾದದ ಕುರಿತು ನಟ ವಿಕ್ಕಿ ಕೌಶಲ್ ಹೇಳಿದ್ದೇನು?

ಅಬುಧಾಬಿ: IIFA2023 ಸಮಾರಂಭದಲ್ಲಿ ಭಾಗವಹಿಸಲು ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಮತ್ತೊಬ್ಬ ನಟ ವಿಕ್ಕಿ ಕೌಶಲ್ ಅಬುಧಾಬಿಗೆ ಶುಕ್ರವಾರ ಆಗಮಿಸಿದರು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್‌ರ ಅಂಗರಕ್ಷಕರು ವಿಕ್ಕಿ ಕೌಶಲ್‌ರನ್ನು ತಳ್ಳಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೆಲವು ನೆಟ್ಟಿಗರು ಸಲ್ಮಾನ್ ಖಾನ್ ಅಂಗರಕ್ಷಕರ ವರ್ತನೆ ಕುರಿತು ತಕರಾರು ತೆಗೆದಿದ್ದರು. ಆದರೆ, ಈ ಕುರಿತು ಸಂಜೆ ಪ್ರತಿಕ್ರಿಯಿಸಿರುವ ವಿಕ್ಕಿ ಕೌಶಲ್, "ಬಹುತೇಕ ಸಂದರ್ಭಗಳಲ್ಲಿ ಕೆಲವು ಸಂಗತಿಗಳ ಕುರಿತು ಅನಗತ್ಯವಾಗಿ ಬೊಬ್ಬೆ ಹೊಡೆಯಲಾಗುತ್ತದೆ. ಅದರಲ್ಲಿ ಯಾವ ಹುರುಳೂ ಇರುವುದಿಲ್ಲ. ವಿಡಿಯೊದಲ್ಲಿ ಕಂಡು ಬಂದಿರುವಂತೆಯೇ ಘಟನೆ ನಡೆದಿಲ್ಲ. ಅದರ ಕುರಿತು ಮಾತಾಡುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಹೇಳಿದ್ದಾರೆ.
ಕಳೆದ ಶುಕ್ರವಾರ ಸಂಜೆ ವಿಕ್ಕಿ ಕೌಶಲ್ ಅವರು ಸಲ್ಮಾನ್ ಖಾನ್ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದಾಗ ಅವರ ಅಂಗರಕ್ಷಕರೊಬ್ಬರು ವಿಕ್ಕಿ ಕೌಶಲ್ ಅವರನ್ನು ಹಿಂದಕ್ಕೆ ನೂಕಿದ್ದರು. ಈ ವಿಡಿಯೊ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.
ಸಮಾರಂಭದ ಸ್ಥಳಕ್ಕೆ ಆಗಮಿಸಿದ ಸಲ್ಮಾನ್ ಖಾನ್‌ರೊಂದಿಗೆ ವಿಕ್ಕಿ ಕೌಶಲ್ ಮಾತನಾಡಲು ಯತ್ನಿಸುತ್ತಿರುವುದು, ಆದರೆ ಸಲ್ಮಾನ್ ಖಾನ್ ಅಂಗರಕ್ಷಕನೊಬ್ಬ ಅವರನ್ನು ಹಿಂದಕ್ಕೆ ದೂಡುತ್ತಿರುವುದೂ ವಿಡಿಯೊದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಕೆಲವರು ಸಲ್ಮಾನ್ ಖಾನ್ ವರ್ತನೆಯನ್ನು ಒರಟು ಎಂದು ಟೀಕಿಸಿದರೆ ಮತ್ತೆ ಕೆಲವರು ಅದನ್ನು ಹುಲಿಯ ಜಂಭ ಎಂದು ಬಣ್ಣಿಸಿದ್ದರು.
#Watch | Vicky Kaushal gets pushed due to Salman Khan’s huge security entourage at IIFA.
— IndiaToday (@IndiaToday) May 26, 2023
What are your thoughts on this?
.
.
.#VickyKaushal #SalmanKhan #Security #IIFA #ViralVideo #Bollywood pic.twitter.com/29UYSMfbyt