AAP ‘ಗ್ಯಾರಂಟಿ’ಗಳನ್ನು ಕಾಂಗ್ರೆಸ್ ನಕಲು ಮಾಡಬಹುದು, ಅನುಷ್ಠಾನ ಮಾಡಲು ಸಾಧ್ಯವೇ?: ಬ್ರಿಜೇಶ್ ಕಾಳಪ್ಪ
► ಕಾಂಗ್ರೆಸ್ ನಾಯಕರು ಕೇಜ್ರಿವಾಲ್ ಜೊತೆ ಮಾಹಿತಿ ಪಡೆದುಕೊಳ್ಳಲಿ

ಬೆಂಗಳೂರು: ಎಎಪಿ ಗ್ಯಾರಂಟಿಗಳನ್ನು ಕಾಂಗ್ರೆಸ್ ನಕಲು ಮಾಡಬಹುದು, ಆದರೆ, ಎಎಪಿ ರೀತಿ ಅನುಷ್ಠಾನ ಮಾಡಲು ಸಾಧ್ಯವೇ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ AAP ನಾಯಕ ಬ್ರಿಜೇಶ್ ಕಾಳಪ್ಪ ಅವರು, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಶೇಕಡಾ 90 ರಷ್ಟು ಆಶ್ವಾಸನೆಗಳು ಆಮ್ ಆದ್ಮಿ ಪಕ್ಷದಿಂದ ಪ್ರೇರಣೆ ಪಡೆದುಕೊಂಡಿದೆ ಅಥವಾ ಕಾಪಿ ಮಾಡಿಕೊಂಡಿದೆ. ತಾವು ಘೋಷಿಸಿದ ಭರವಸೆಗಳನ್ನು ಹೇಗೆ ಪೂರೈಸುವುದೆಂದು ಕೇಳಿ ಕಲಿಯಲು ದೆಹಲಿ ಮತ್ತು ಪಂಜಾಬ್ ಗಳಲ್ಲಿರುವ ತಮ್ಮ ಬ್ಯಾಚ್ ಮೇಟ್ಸ್ ಗಳಾದ ಸ್ಥಳೀಯ IAS, KAS ಅಧಿಕಾರಿಗಳ ಬಳಿ ವೈಯಕ್ತಿಕವಾಗಿ ಇಲ್ಲಿನ IAS, KAS ಅಧಿಕಾರಿಗಳ ದಂಡನ್ನೇ ಕಳುಹಿಸಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಕೇಜ್ರಿವಾಲ್ ಜೊತೆ ಮಾತನಾಡಿ. ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣ, ಉಚಿತ ವಿದ್ಯುಚ್ಛಕ್ತಿ, ಹಾಗೂ ಇತರ ಭತ್ಯೆ ವಿತರಣೆಯ ಬಗ್ಗೆ ಮಾಹಿತಿ ಸಂಗ್ರಹಣೆಯಾಗಿದೆ. ಅವುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದು ಬಹಿರಂಗ ಆಹ್ವಾನ ನೀಡಿದರು.
ಎಎಪಿ ಗ್ಯಾರಂಟಿಗಳನ್ನು ಕಾಂಗ್ರೆಸ್ ನಕಲು ಮಾಡಬಹುದು, ಆದರೆ, ಎಎಪಿ ರೀತಿ ಅನುಷ್ಠಾನ ಮಾಡಲು ಸಾಧ್ಯವೇ?
— AAP Bengaluru (@AAPBangalore) May 27, 2023
Copycat Congress, Congress manifesto is inspired by AAP!@brijeshkalappa pic.twitter.com/WEUkt4zOAT