Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಯುವಜನರು ಕೇವಲ ಮ್ಯಾನೇಜರ್ ಗಳಾಗದೆ ಲೀಡರ್...

ಯುವಜನರು ಕೇವಲ ಮ್ಯಾನೇಜರ್ ಗಳಾಗದೆ ಲೀಡರ್ ಆಗಲು ಶ್ರಮಿಸಿ: ಸೈಯದ್ ಬ್ಯಾರಿ

ಬಿಐಟಿಯಲ್ಲಿ ‘ಬ್ಯಾರೀಸ್ ಉತ್ಸವ್-2023’ ಕಾರ್ಯಕ್ರಮ

27 May 2023 11:56 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಯುವಜನರು ಕೇವಲ ಮ್ಯಾನೇಜರ್ ಗಳಾಗದೆ ಲೀಡರ್ ಆಗಲು ಶ್ರಮಿಸಿ: ಸೈಯದ್ ಬ್ಯಾರಿ
ಬಿಐಟಿಯಲ್ಲಿ ‘ಬ್ಯಾರೀಸ್ ಉತ್ಸವ್-2023’ ಕಾರ್ಯಕ್ರಮ

ಮಂಗಳೂರು, ಮೇ 27: ಜಗತ್ತಿನಲ್ಲಿ ದಿನದಿಂದ ದಿನಕ್ಕೆ ತಂತ್ರಜ್ಞಾನಗಳ ಬದಲಾವಣೆಯಾಗುತ್ತಿದೆ. ದೇಶದ ಯುವ ಸಮೂಹವು ಕಾಲಕಾಲಕ್ಕೆ ಈ ಬದಲಾವಣೆಗಳಿಗೆ ಹೊಂದಿಕೊಂಡು ಆಧುನಿಕ ತಂತ್ರಜ್ಞಾನಗಳ ಅವಕಾಶಗಳನ್ನು ಸಂಪೂರ್ಣವಾಗಿ, ಸಮರ್ಥವಾಗಿ ಬಳಸಿಕೊಳ್ಳಬೇಕಿದೆ. ಯುವಜನರು  ‘ಮ್ಯಾನೇಜರ್’ ಅಗುವ ಬದಲು ‘ಲೀಡರ್’ ಆಗಲು ಹಂಬಲಿಸಬೇಕು. ಜವಾಬ್ದಾರಿಗಳನ್ನು ಗುಣಾತ್ಮಕವಾಗಿ ಬಳಸಿಕೊಳ್ಳಬೇಕು. ಅದಕ್ಕಾಗಿ  ತ್ಯಾಗಕ್ಕೂ ಸಿದ್ಧರಾಗಬೇಕು. ಆವಾಗ ಮಾತ್ರ  ಗುರಿ ತಲುಪಬಹುದು. ಭಾರತದ ಗತ ವೈಭವವನ್ನು ಮರಳಿ ತರಬಹುದು. ಯುವಜನರು  ವಿಶಾಲ ಹೃದಯಿಗಳಾಗಿ  ಆಧ್ಯಾತ್ಮಿಕ ಚಿಂತನೆಯನ್ನೂ ಮೈಗೂಡಿಸಿಕೊಳ್ಳಬೇಕಿದೆ ಎಂದು  ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಕರೆ ನೀಡಿದರು.

ಇನೋಳಿಯ  ಬ್ಯಾರೀಸ್ ನಾಲೇಜ್ ಕ್ಯಾಂಪಸ್‌ನಲ್ಲಿ ಶನಿವಾರ ನಡೆದ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್), ಬ್ಯಾರೀಸ್ ಇನ್‌ಸ್ಟಿಟ್ಯೂಟ್  ಆಫ್ ಇಂಜಿನಿಯರಿಂಗ್ ಸೈಯನ್ಸಸ್ ಹಾಗೂ ಬಿಐಟಿ ಪಾಲಿಟೆಕ್ನಿಕ್ ಇವುಗಳ ‘ಬ್ಯಾರೀಸ್ ಉತ್ಸವ್-2023’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವವು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಕಳೆದೊಂದು ಶತಮಾನದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆದ ಬದಲಾವಣೆ ಈಗ  ಕೇವಲ 10 ವರ್ಷಗಳಲ್ಲಿ ಸಂಪೂರ್ಣ  ಬದಲಾವಣೆಯಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. 21ನೇ ಶತಮಾನವು ಅತ್ಯಂತ ಡೈನಾಮಿಕ್ ಆಗಿದೆ. ಮುಂದಿನ 2-3 ವರ್ಷಗಳಲ್ಲಿ ತಂತ್ರಜ್ಞಾನದಲ್ಲಿ ಆಗಲಿರುವ ಬದಲಾವಣೆಯನ್ನು ಯಾರಿಗೂ ಊಹಿಸಲು ಸಾದ್ಯವಿಲ್ಲ ಎಂದ ಸೈಯದ್ ಮುಹಮ್ಮದ್ ಬ್ಯಾರಿ ‘ಹೆತ್ತವರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸುವಾಗ ಉತ್ತಮ ವೈದ್ಯ, ಉತ್ತಮ ಇಂಜಿನಿಯರ್ ಆಗಲಿ ಒಂದು ಬಯಸುತ್ತಾರೆ. ಆದರೆ  ನಮ್ಮ ಮಕ್ಕಳನ್ನು ಉತ್ತಮ ಮನುಷ್ಯರಾಗಿ ರೂಪಿಸಿ, ಅಷ್ಟು ಸಾಕು ಎಂದು ಹೇಳುವ ಕಾಲ ಬೇಗ ಬರಲಿದೆ ’ ಎಂದು ಅವರು ಅಭಿಪ್ರಾಯಪಟ್ಟರು.

ಪದವೀಧರರು ಉದ್ಯೋಗ ಗಳಿಸಲು ಅಥವಾ ವೇತನ ಪಡೆಯಲು ಮಾತ್ರ ಹಂಬಲಿಸದೆ ಹೊಸತನ್ನು ಕಲಿಯಲು ಹೆಚ್ಚಿನ ಆದ್ಯತೆ ನೀಡಬೇಕು. ಭಾರತವು ಜಗತ್ತಿನ ಅತೀ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶ. ಈ  ಯುವ ಸಮೂಹ  ತಮ್ಮ ಉನ್ನತ ಶಿಕ್ಷಣ ಕಲಿಕೆಯ  ಅವಧಿಯನ್ನು ಭವಿಷ್ಯದ ಹಿತದೃಷ್ಟಿಯಿಂದ ಅಮೂಲ್ಯ ಕ್ಷಣಗಳನ್ನಾಗಿ ಮಾರ್ಪಡಿಸಬೇಕು ಎಂದರು.

ಶತಮಾನದ ಹಿಂದೆ ಹಿರಿಯರಿಂದ ಸ್ಥಾಪಿಸಲ್ಪಟ್ಟ ಈ ಬ್ಯಾರೀಸ್ ಶಿಕ್ಷಣ ಸಮೂಹದಡಿ ಇಂದು 20ಕ್ಕೂ ಅಧಿಕ ಸಂಸ್ಥೆಗಳಿದ್ದು, 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಸೈಯದ್ ಮುಹಮ್ಮದ್ ಬ್ಯಾರಿ ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಪೊಲೀಸ್ ಉಪಾಯುಕ್ತ (ಕಾನೂನು ಮತ್ತು ಸುವ್ಯವಸ್ಥೆ ವಿಭಾಗ) ಅಂಶುಕುಮಾರ್ ಮಾತನಾಡಿ, ಕಾಲೇಜಿನ ಬದುಕು ಅಮೂಲ್ಯವಾದುದು.  ಹಳೆಯ ಘಟನೆಗಳನ್ನು ನೆನಪಿಸುವಾಗ ಕಾಲೇಜು ದಿನಗಳ ನೆನಪು ಆಗದೇ ಇರದು. ಈ ಅದೃಷ್ಟದ ಕ್ಷಣಗಳನ್ನು ಮತ್ತೆಂದೂ ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಬದುಕಿನ ಭದ್ರತೆಗೆ ಅಡಿಪಾಯ ಹಾಕಬೇಕಿದ್ದರೆ ಕಾಲೇಜಿನ ದಿನಗಳಲ್ಲಿ ಪಠ್ಯೇತರದ ಜೊತೆಗೆ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಮತ್ತೋರ್ವ ಮುಖ್ಯ ಅತಿಥಿ ಮಂಗಳೂರಿನ ಕೋಡ್ ಕ್ರಾಫ್ಟ್ ಟೆಕ್ನಾಲಜೀಸ್‌ನ ಸಹ-ಸ್ಥಾಪಕ ಮತ್ತು ಸಿಟಿಒ ಪ್ರವೀಣ್ ಕ್ಯಾಸ್ಟಲಿನೊ  ಮಾತನಾಡಿ ಶಿಕ್ಷಣ, ಅನುಭವ, ಹಣಕಾಸು, ಕೌಟುಂಬಿಕ, ಆರೋಗ್ಯ ಹೀಗೆ ಎಲ್ಲದರಲ್ಲೂ  ಸಂತುಲನೆ ಕಾಯ್ದುಕೊಂಡರೆ ಬದುಕಿನಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಸಣ್ಣ ಸಣ್ಣ ಹೆಜ್ಜೆಗಳನ್ನು ಮುಂದಿಡುತ್ತಲೇ ಬದುಕಿನ ಹಲವು ಆಯಾಮಗಳನ್ನು ಅರಿತುಕೊಂಡು ಮುನ್ನುಗ್ಗಬೇಕಿದೆ ಎಂದರು.

ಇನ್ನೋರ್ವ ಮುಖ್ಯ ಅತಿಥಿ ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ, ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ, ಪ್ರೊ-ಕಬಡ್ಡಿ ಕೋಚ್ ಜಗದೀಶ್ ಕುಂಬ್ಳೆ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಾಗವಾರದು. ಪಠ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು. ಅದರಲ್ಲೂ ಕ್ರೀಡೆಗೆ ವಿಶೇಷ ಆದ್ಯತೆ ನೀಡಬೇಕು ಎಂದರು.

ಬಿಐಟಿ ಪ್ರಾಂಶುಪಾಲ ಡಾ. ಎಸ್.ಐ. ಮಂಜೂರ್ ಬಾಷಾ, ಬೀಡ್ಸ್  ಪ್ರಾಂಶುಪಾಲ ಖಲೀಲ್ ಶೇಖ್, ಬಿಐಟಿ  ಪ್ರಾಂಶುಪಾಲ ಪ್ರೊ. ಪೃಥ್ವಿರಾಜ್ ಎಂ., ಬಿಐಇಎಸ್  ಪ್ರಾಂಶುಪಾಲ   ಡಾ. ಅಝೀಝ್ ಮುಸ್ತಫಾ ವಾರ್ಷಿಕ ವರದಿಗಳನ್ನು ವಾಚಿಸಿದರು. ಅಕಾಡಮಿ ವರ್ಷದ ಟಾಪರ್ಸ್, ಕ್ರೀಡಾ ಸಾಧಕರಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಕ್ರೀಡಾ ಚಾಂಪಿಯನ್‌ಗಳಿಗೆ ಟ್ರೋಫಿ ವಿತರಿಸಲಾಯಿತು.

ಮರಿಯತ್ ಶಬ್ನಂ, ಶಿರೀನ್ ಫಾತಿಮಾ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿನುತಾ, ಪ್ರೊ. ಮುಬೀನಾ ಪರ್ವೀನ್ ತಾಜ್ ಸಾಧಕ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ರೇಣುಕಾ ಮತ್ತು ತಂಡವು ಪ್ರಾರ್ಥನಾ ಗೀತೆ ಹಾಡಿತು. ಡಾ. ನಳಿನಿ ರೆಬೆಲ್ಲೊ ಸ್ವಾಗತಿಸಿದರು. ಮುಹಮ್ಮದ್ ಸಿನಾನ್ ವಂದಿಸಿದರು. ಬಿಲಾಲ್ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರೀಸ್ ನಿಂದ ಮೈಕ್ರೋಸಾಫ್ಟ್ ನ ಪ್ರಪ್ರಥಮ ಡೇಟಾ ಸೆಂಟರ್ ನಿರ್ಮಾಣ : ಸಯ್ಯದ್ ಬ್ಯಾರಿ   

ಇವತ್ತು ದೇಶದಲ್ಲಿ ಮೈಕ್ರೋಸಾಫ್ಟ್ ನ ಪ್ರಪ್ರಥಮ ಡೇಟಾ ಸೆಂಟರ್ ಅನ್ನು ಹೈದರಾಬಾದ್ ನಲ್ಲಿ ಬ್ಯಾರೀಸ್ ಗ್ರೂಪ್ ನಿರ್ಮಿಸುತ್ತಿದೆ. ಅಂತಹ ಪ್ರತಿಷ್ಠಿತ ಯೋಜನೆಯಲ್ಲಿ ಕೆಲಸ ಮಾಡುವ ಅವಕಾಶ ಬಿಐಟಿಯ ಸಿವಿಲ್ ಹಾಗು ಮೆಕ್ಯಾನಿಕಲ್ ಇಂಜಿನಿಯರ್ ಗಳಿಗೆ ನಾವು ಒದಗಿಸಿದ್ದೇವೆ. ಅಲ್ಲಿ ಅವರು ದೇಶದ ಇತರ ಭಾಗದ ಇಂಜಿನಿಯರ್ ಗಳನ್ನೂ ಮೀರಿಸಿ ಅತ್ಯುತ್ತಮ ನಿರ್ವಹಣೆ ತೋರಿರುವುದು ನಮಗೆ ಹೆಮ್ಮೆಯ ಸಂಗತಿ. ಇವತ್ತು ಈ ಜಗತ್ತಿಗೆ ಬೇಕಿರುವುದು ಸಾಮಾನ್ಯ ಇಂಜಿನಿಯರ್ ಗಳಲ್ಲ. ತಾವು ಕಲಿತಿದ್ದನ್ನು ಹೇಗೆ ಕೆಲಸಕ್ಕೆ ಅತ್ಯುತ್ತಮವಾಗಿ ಬಳಸಬೇಕು ಎಂದು ಚೆನ್ನಾಗಿ ತಿಳಿದಿರುವ, ಅಸಾಮಾನ್ಯ ಪ್ರತಿಭೆಯ, ಬುದ್ಧಿವಂತ, ನಿಷ್ಠಾವಂತ, ಹೊಣೆಯರಿತ, ಸಮಯ ಪ್ರಜ್ಞೆ ಇರುವ ಇಂಜಿನಿಯರ್ ಗಳಿಗೆ ಇವತ್ತು ಇಡೀ ವಿಶ್ವದಲ್ಲೇ ಅತ್ಯುತ್ತಮ ಅವಕಾಶಗಳಿವೆ ಎಂದು ಸಯ್ಯದ್ ಬ್ಯಾರಿ ಹೇಳಿದರು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X