ಮಂಗಳೂರು: ಯುವತಿಗೆ ಕಿರುಕುಳ, ಹಲ್ಲೆ ಆರೋಪ; ಪ್ರಕರಣ ದಾಖಲು

ಉಳ್ಳಾಲ: ಅಪರಿಚಿತ ಯುವಕನೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾನೆ ಎನ್ನಲಾದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಭಗವತೀ ದೇವಸ್ಥಾನ ಬಳಿ ಶುಕ್ರವಾರ ತಡರಾತ್ರಿ ನಡೆದಿದ್ದು, ಯುವತಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತೆ ಯುವತಿ ಬಸ್ತಿಪಡ್ಪು ತನ್ನ ನಿವಾಸದಿಂದ ಭಗವತಿ ದೇವಸ್ಥಾನದ ಒಳರಸ್ತೆಯಾಗಿ ನಡೆದು ಕೊಂಡು ಹೋಗುತ್ತಿದ್ದಾಗ ಕಬ್ಬಿಣದ ಕಪಾಟು ತಯಾರು ಮಾಡುವ ಅಂಗಡಿ ಬಳಿ ನಿಂತಿದ್ದ ಅಪರಿಚಿತ ಯುವಕ ಈಕೆಯ ಬಳಿ ಬಂದು ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story