ಕಾರ್ಕಳ: ಜೋಕಾಲಿಗೆ ಸಿಲುಕಿ ಬಾಲಕಿ ಮೃತ್ಯು
ಕಾರ್ಕಳ, ಮೇ 27: ಜೋಕಾಲಿ ಆಡುತ್ತಿದ್ದ ಬಾಲಕಿಯೊಬ್ಬಳು ಕುತ್ತಿಗೆಗೆ ಸೀರೆ ಸುತ್ತಿಕೊಂಡು ಮೃತಪಟ್ಟ ಘಟನೆ ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಮೇ 26ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಅಂತೊಟ್ಟು ನಿವಾಸಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು ಮಾನ್ವಿ (9) ಎಂದು ಗುರುತಿಸಲಾಗಿದೆ.
ಈಕೆ ನೆರೆಮನೆಯ ಸಂಬಂಧಕ ಮನೆಯ ಬಳಿ ಇತರರೊಂದಿಗೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಮಾನ್ವಿಯ ಕುತ್ತಿಗೆಗೆ ಸುತ್ತಿಕೊಂಡು ಮೃತಪಟ್ಟರೆಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story