ಸೈಕಲ್ ಕದ್ದಿರುವ ಶಂಕೆ : ವ್ಯಕ್ತಿಯ ಥಳಿಸಿ ಹತ್ಯೆ

ಕೋಲ್ಕತಾ, ಮೇ 27: ಸೈಕಲ್ ಕದ್ದಿದ್ದಾನೆಂದು ಶಂಕಿಸಿ ಗುಂಪೊಂದು ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದ ಘಟನೆ ಪಶ್ಚಿಮಬಂಗಾಳದ ಹೂಗ್ಲಿಯ ಸಹಗಂಜ್ ಡನ್‌ಲಪ್‌ನಲ್ಲಿ ನಡೆದಿದೆ.
ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಗೀಡಾದ ವ್ಯಕ್ತಿಯನ್ನು ಗೋಡಾ ದಾಸ್ (55) ಎಂದು ಗುರುತಿಸಲಾಗಿದೆ. ಇಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಈತ ದಿನಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸೈಕಲ್ ಕಳವುಗೈದಿರುವ ಶಂಕೆಯಿಂದ ಗುಂಪೊಂದು ಈತನನ್ನು ಶುಕ್ರವಾರ ಬೆಳಗ್ಗೆ ಮರಕ್ಕೆ ಕಟ್ಟಿ ಹಾಕಿ ಥಳಿಸಿತ್ತು. ಈತನ ಮೃತದೇಹ ನಹುನ್‌ಪಾರಾದ ಹೊಲದಲ್ಲಿ ಶನಿವಾರ ಬೆಳಗ್ಗೆ ಪತ್ತೆಯಾಗಿತ್ತು.
ಘಟನೆಗೆ ಸಂಬಂಧಿಸಿ ಮೊಗ್ರಾದ ನಿವಾಸಿಯಾಗಿರುವ ಬ್ರಿಜೇಶ್ ಸಿಂಗ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
Next Story