ಕೇರಳ ಬಿಲೀವರ್ಸ್ ಚರ್ಚ್‌ನಿಂದ ರೂ. 7000 ಕೋಟಿ ವಶ ವದಂತಿ; ವಾಸ್ತವ ಇಲ್ಲಿದೆ...

ತಿರುವನಂತಪುರ: ನೋಟಿನ ಕಂತೆ ಮತ್ತು ಕ್ರಿಶ್ಚಿಯನ್ ಪಾದ್ರಿಯೊಬ್ಬರ ಕೊಲ್ಯಾಜ್ ಮಾಡಲಾದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇರಳದ ಬಿಲೀವರ್ಸ್ ಈಸ್ಟರ್ನ್ ಚರ್ಚ್‌ನಿಂದ ಕಾನೂನು ಜಾರಿ ನಿರ್ದೇಶನಾಲಯ ಈ ಭಾರಿ ಮೊತ್ತದ ಹಣ ವಶಪಡಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೇ ಚಿತ್ರ 2021ರಲ್ಲಿ ಕೂಡಾ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಚಿತ್ರಗಳು ಆರ್ಕೀವ್‌ನಲ್ಲಿ ಕಂಡುಬಂದಿವೆ.
ವಾಸ್ತವ ಏನು?: ಫೋಟೊ ಹಂಚಿಕೊಂಡವರ ಪ್ರಕಾರ, 2020ರ ನವೆಂಬರ್‌ನಲ್ಲಿ ಕೇರಳದ ಬಿಲೀವರ್ಸ್ ಈಸ್ಟರ್ನ್‌ಚರ್ಚ್‌ನಿಂದ ಸುಮಾರು ಆರು ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. ಈ ಶೀರ್ಷಿಕೆಯಲ್ಲಿ ಕೇಳಿದಂತೆ 7000 ಕೋಟಿ ರೂಪಾಯಿ ಅಲ್ಲ. ಅದಕ್ಕಿಂತಲೂ ಹೆಚ್ಚಾಗಿ ಈ ದಾಳಿ ನಡೆಸಿರುವುದು ಕಾನೂನು ಜಾರಿ ನಿರ್ದೇಶನಾಲಯ ಅಲ್ಲ. ಆದಾಯ ತೆರಿಗೆ ಇಲಾಖೆ ಎಂದು thequint.com ವರದಿ ಮಾಡಿದೆ.
Next Story