ಬಿಜೆಪಿಯವರ ಜ್ಞಾನದ ಮಟ್ಟದ ಬಗ್ಗೆ ಅನುಮಾನವಿದೆ: ದಿನೇಶ್ ಗುಂಡೂರಾವ್

ಬೆಂಗಳೂರೂ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ನೂತನಾರಿಗೆ ಉದ್ಯೋಗ ಮರಳಿ ಕೊಡುವುದಾಗಿ ಹೇಳಿದ ಮೇಲೂ BJPಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ತಾತ್ಕಾಲಿಕ ಉದ್ಯೋಗ ಕಳೆದುಕೊಂಡಿರುವ ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರಿಗೆ ಮಾನವೀಯ ಆಧಾರದಲ್ಲಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದು ನಮ್ಮ ಸರ್ಕಾರದ ನಿಜವಾದ ಅಂತಃಕರಣ. ಉದ್ಯೋಗ ಮರಳಿ ಕೊಡುವುದಾಗಿ ಹೇಳಿದ ಮೇಲೂ BJPಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ ಎಂದಿದ್ದಾರೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದಿನ ಸರ್ಕಾರದ ತಾತ್ಕಾಲಿಕ ನೇಮಕಾತಿಗಳು ರದ್ದಾಗುವುದು ಸಹಜ. ನೆಟ್ಟಾರು ಪತ್ನಿಯ ಉದ್ಯೋಗ ರದ್ದಾಗಿರುವುದು ಇದೇ ಕಾರಣಕ್ಕೆ. ಇದು BJPಯವರಿಗೆ ಅರ್ಥವಾಗದಿದ್ದರೆ ಅವರ ಜ್ಞಾನದ ಮಟ್ಟದ ಬಗ್ಗೆಯೇ ಅನುಮಾನವಿದೆ ಎಂದು ಟ್ವೀಟ್ ಮಾಡಿದ್ದಾರೆ.
2
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 28, 2023
ತಾತ್ಕಾಲಿಕ ಉದ್ಯೋಗ ಕಳೆದುಕೊಂಡಿರುವ ಪ್ರವೀಣ್ ನೆಟ್ಟಾರು ಪತ್ನಿ ನೂತನಾರವರಿಗೆ ಮಾನವೀಯ ಆಧಾರದಲ್ಲಿ ಉದ್ಯೋಗ ನೀಡುವುದಾಗಿ CM @siddaramaiah ಹೇಳಿದ್ದಾರೆ.
ಇದು ನಮ್ಮ ಸರ್ಕಾರದ ನಿಜವಾದ ಅಂತಃಕರಣ.
ಉದ್ಯೋಗ ಮರಳಿ ಕೊಡುವುದಾಗಿ ಹೇಳಿದ ಮೇಲೂ BJPಯವರು ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿ ಅಲ್ಲ.