'ಇಡೀ ದೇಶವೇ ನೋಡುತ್ತಿದೆ': ಕುಸ್ತಿಪಟುಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ವ್ಯಾಪಕ ಆಕ್ರೋಶ

ಹೊಸದಿಲ್ಲಿ: ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದ ಕಡೆಗೆ ತೆರಳುತ್ತಿದ್ದ ಪ್ರತಿಭಟನಾನಿರತ ಕುಸ್ತಿಪಟುಗಳನ್ನು ಪೊಲೀಸರು ಆಕ್ರಮಣಕಾರಿಯಾಗಿ ಬಂಧಿಸಿರುವುದರ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. "ಇಡೀ ದೇಶವೇ ಈ ಅಕ್ರಮವನ್ನು ನೋಡುತ್ತಿದೆ. ಇದು ಅನ್ಯಾಯ" ಎಂದು ಪ್ರಿಯಾಂಕಾ ಗಾಂಧಿ ಟ್ವೀಟಿಸಿದ್ದಾರೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ‘ಮಹಿಳಾ ಮಹಾಪಂಚಾಯತ್’ ನಡೆಸಲು ಸಂಸತ್ತಿಗೆ ಮೆರವಣಿಗೆ ನಡೆಸುತ್ತಿದ್ದ ಬಜರಂಗ್ ಪುನಿಯಾ, ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.
ದೇಶಕ್ಕಾಗಿ ಪ್ರಶಸ್ತಿಗಳನ್ನು ಗೆದ್ದಿರುವ ಈ ಕೆಲವು ಅಥ್ಲೀಟ್‌ಗಳನ್ನು ಈ ರೀತಿ ಅಕ್ರಮಣಕಾರಿಯಾಗಿ ನಡೆಸಿ ಬಂಧಿಸಿದ ವರದಿಗಳಿಗೆ ಇತರ ವಿರೋಧ ಪಕ್ಷದ ನಾಯಕರು ಪ್ರತಿಕ್ರಿಯಿಸಿದ್ದಾರೆ.
"ನಿರಂಕುಶ ಶಕ್ತಿಗಳು ಅಸಹಿಷ್ಣುತೆ ಮತ್ತು ಭಿನ್ನಾಭಿಪ್ರಾಯವನ್ನು ಶಮನಗೊಳಿಸುವುದರ ಮೂಲಕ ಅಭಿವೃದ್ಧಿ ಹೊಂದುತ್ತವೆ" ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಿದರೆ, ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಹಿಳಾ ಕುಸ್ತಿಪಟುಗಳನ್ನು ಏಕೆ ಬಂಧಿಸಲಾಗಿದೆ? ಆರ್‌ಎಲ್‌ಡಿ ಪ್ರಶ್ನಿಸಿದೆ.
खिलाड़ियों की छाती पर लगे मेडल हमारे देश की शान होते हैं। उन मेडलों से, खिलाड़ियों की मेहनत से देश का मान बढ़ता है।
— Priyanka Gandhi Vadra (@priyankagandhi) May 28, 2023
भाजपा सरकार का अहंकार इतना बढ़ गया है कि सरकार हमारी महिला खिलाड़ियों की आवाजों को निर्ममता के साथ बूटों तले रौंद रही है।
ये एकदम गलत है। पूरा देश सरकार के… pic.twitter.com/xjreCELXRN
This is how our champions are being treated. The world is watching us! #WrestlersProtest pic.twitter.com/rjrZvgAlSO
— Sakshee Malikkh (@SakshiMalik) May 28, 2023