ಮಂಗಳೂರು: ಅಡ್ಯಾರ್ ಗಾರ್ಡನ್ ನಲ್ಲಿ 'ಯಕ್ಷಧ್ರುವ ಪಟ್ಲ ಸಂಭ್ರಮ'

ಮಂಗಳೂರು,ಮೇ.28: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಸಾರಥ್ಯದಲ್ಲಿ ರವಿವಾರ ಯಕ್ಷಧ್ರುವ ಪಟ್ಲ ಸಂಭ್ರಮ-2023 ಇದರ ಉದ್ಘಾಟನೆ ಕಾರ್ಯಕ್ರಮವನ್ನು ಅಡ್ಯಾರ್ ಗಾರ್ಡನ್ ನಲ್ಲಿ ನೆಟ್ ವಕ್೯ ಎಕ್ಸ್ ಕ್ಲೂಸಿವ್ ನಿರ್ದೇಶಕ ಸಿಎ ದಿವಾಕರ್ ರಾವ್ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಪಟ್ಲ ಸತೀಶ್ ಶೆಟ್ಟಿಯವರು ಯಕ್ಷಗಾನ ಕಲಾವಿದರ ಹಿತರಕ್ಷಣೆಗಾಗಿ ಸ್ಥಾಪಿಸಿರುವ ಪಟ್ಲ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸದಾ ಮುಂದಿದೆ. ಅವರು ಮುಂದೆಯೂ ಇದೇ ರೀತಿ ಸಮಾಜದ ನೊಂದವರ ಕಣ್ಣೀರು ಒರೆಸಲಿ. ಜಾತಿ ಧರ್ಮ ಬೇಧಭಾವವಿಲ್ಲದೆ ಎಲ್ಲರನ್ನೂ ತಮ್ಮವರೆಂದುಕೊಂಡಿರುವ ಪಟ್ಲ ಸತೀಶ್ ಶೆಟ್ಟಿಯವರು ಅಭಿನಂದನಾರ್ಹರು" ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮಿನಾರಾಯಣ ಅಸ್ರಣ್ಣ, ಮಾಣಿಲಶೀ, ಎಡನೀರು ಸಂಸ್ಥಾನದ ಸಚ್ಚಿದಾನಂದ ಭಾರತಿಶ್ರೀ, ಟ್ರಸ್ಟ್ ನ ಪ್ರಧಾನ ಸಂಚಾಲಕ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಉದ್ಯಮಿ, ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡಾ, ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ, ಸಿಎ ದಿವಾಕರ್ ರಾವ್ ಕಟೀಲು, ಡಾ.ಪ್ರಶಾಂತ್ ಮಾರ್ಲ, ಡಾ. ಗಣೇಶ್ ಹೆಚ್.ಕೆ, ಅಶೋಕ್ ಶೆಟ್ಟಿ ಬೆಳ್ಳಾಡಿ, ಡಿ.ಆರ್. ರಾಜು, ಕುಡುಪು ನರಸಿಂಹ ತಂತ್ರಿ, ಸವಣೂರು ಸೀತಾರಾಮ್ ರೈ, ಪೆರ್ಮುದೆ ಅಶೋಕ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಭುಜಬಲಿ ಧರ್ಮಸ್ಥಳ, ಜಯರಾಮ ಶೇಖ, ಉದಯ್ ಶೆಟ್ಟಿ ಕೆರೆಕಟ್ಟೆ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಉಪಾಧ್ಯಕ್ಷ ಮನು ರಾವ್, ರವಿಚಂದ್ರ ಶೆಟ್ಟಿ ಅಶೋಕನಗರ, ದುರ್ಗಾಪ್ರಸಾದ್, ಜಗನ್ನಾಥ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಕಲಾ ಗೌರವ
ವೈದಿಕ ಕ್ಷೇತ್ರದ ಸಾಧಕ ಕುಡುಪು ನರಸಿಂಹ ತಂತ್ರಿಗಳು, ಮಾಧ್ಯಮ ಕ್ಷೇತ್ರದಲ್ಲಿ ಮನೋಹರ ಪ್ರಸಾದ್, ಭಾರತೀಯ ಸೇನೆಯ ಬ್ರಿಗೇಡಿಯರ್ ಐ.ಎನ್. ರೈ, ಕಲಾ ಸಂಘಟನೆಗಾಗಿ ಕಲಾರಂಗ ಉಡುಪಿ, ಕನ್ನಡ ಸಂಘ ಬಹೈರೆನ್, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ವಿದ್ವಾನ್ ಯೋಗೀಶ್ ಶರ್ಮ, ಹರಿಕಥೆ ಮಹಾಬಲ ಶೆಟ್ಟಿ ಬಳ್ಳಪದವು, ರಂಗಭೂಮಿ/ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ತಮ್ಮ ಲಕ್ಷ್ಮಣ, ಭರತನಾಟ್ಯ ಕ್ಷೇತ್ರದಲ್ಲಿ ನಾಟ್ಯಾಚಾರ್ಯ ಉಳ್ಳಾಲ ಮೋಹನ್‌ಕುಮಾರ್, ಕಂಬಳ ಕ್ಷೇತ್ರದಲ್ಲಿ ಭಾಸ್ಕರ ಕೋಟ್ಯಾನ್, ಕೊಳಕೆ ಇರ್ವತ್ತೂರು, ಡಿ ಮನೋಹರ್ ಕುಮಾರ್, ಶಿವರಾಮ ಪಣಂಬೂರು, ಕೊಳ್ತಿಗೆ ನಾರಾಯಣ ಗೌಡ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.