ಪತ್ನಿಯ ಕೊಲೆ ಪ್ರಕರಣ: ಆರೋಪಿ ಬಂಧನ

ಬೆಂಗಳೂರು, ಮೇ 28:ಎರಡನೆ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪತಿಯನ್ನು ಇಲ್ಲಿನ ಸೂರ್ಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೇಪಾಳ ಮೂಲದ ಅಮರ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಎ.23ರ ಬೆಳಗ್ಗೆ ಆರೋಪಿಯು ಎರಡನೆ ಪತ್ನಿ ನಿಶು(19) ಎಂಬಾಕೆಯ ಕುತ್ತಿಗೆಯನ್ನು ವೈರ್ ನಿಂದ ಬಿಗಿದು ತನ್ನಿಬ್ಬರ ಮಕ್ಕಳ ಮುಂದೆಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಆನಂತರ, ಅತ್ತೆಯ ಮನೆಯಲ್ಲಿ ಇಬ್ಬರು ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಅಮರ್‌ನನ್ನು ಬಂಧಿಸಲಾಗಿದೆ.
Next Story