ಕುಂದಾಪುರ: ಗೂಳಿ ಗುದ್ದಿ ಕೆರೆಗೆ ಬಿದ್ದ ಮಹಿಳೆ ಮೃತ್ಯು

ಕುಂದಾಪುರ, ಮೇ 28: ಗೂಳಿಯೊಂದು ಗುದ್ದಿದ ಪರಿಣಾಮ ಮಹಿಳೆಯೊಬ್ಬರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಮೇ 26ರಂದು ಮಧ್ಯಾಹ್ನ ವೇಳೆ ಕೆಂಚನೂರು ಎಂಬಲ್ಲಿ ನಡೆದಿದೆ.
ಮೃತರನ್ನು ಕರ್ಕುಂಜೆಯ ಗಿರಿಜಾ(42) ಎಂದು ಗುರುತಿಸಲಾಗಿದೆ. ಇವರು ಕೆಂಚನೂರಿನ ಭಾಸ್ಕರ ಪೂಜಾರಿ ಎಂಬವರ ತೋಟದ ಕೆಲಸವನ್ನು ಮುಗಿಸಿ ವಾಪಾಸು ತಮ್ಮ ಮನೆಗೆ ಮಾವಿನಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಎದುರಿನಿಂದ ಬಂದ ಗೂಳಿಯೊಂದು ಗಿರಿಜಾ ಅವರನ್ನು ದೂಡಿ ಹಾಕಿತ್ತೆನ್ನಲಾಗಿದೆ. ಇದರ ಪರಿಣಾಮ ಆಯತಪ್ಪಿ ಮಾವಿನಕೆರೆಗೆ ಬಿದ್ದ ಗಿರಿಜಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story