ಫೈನಲ್ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಂಬಟಿ ರಾಯುಡು

ಚೆನ್ನೈ: ಐಪಿಎಲ್ ನ ಫೈನಲ್ ಪಂದ್ಯಾಟಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗುತ್ತಿರುವಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಶಾಕ್ ನೀಡುವಂತೆ ತಂಡದ ಪ್ರಮುಖ ಆಟಗಾರ ಅಂಬಟಿ ರಾಯುಡು ಐಪಿಎಲ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂಬ ಸೂಚನೆಯನ್ನೂ ಅವರು ತಮ್ಮ ಟ್ವೀಟ್ ನಲ್ಲಿ ನೀಡಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ ಅವರು, ಮುಂಬೈ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎರಡು ಪ್ರಮುಖ ತಂಡಗಳು, 204 ಪಂದ್ಯಗಳು, 14 ಆವೃತ್ತಿಗಳು, 8 ಫೈನಲ್ ಗಳು ಹಾಗೂ 5 ಟ್ರೋಫಿಗಳು. ಇಂದು ಆರನೇ ಟ್ರೋಫಿಯ ಭರವಸೆಯಿದೆ. ಇದೊಂದು ಉತ್ತಮ ಪ್ರಯಾಣ. ಇಂದಿನ ಫೈನಲ್ ಪಂದ್ಯಾಟವು ನನ್ನ ಕೊನೆಯ ಐಪಿಎಲ್ ಪಂದ್ಯ ಆಗಿರಲಿದೆ. ನಾನು ಈ ಆಟವನ್ನು ನಿಜಕ್ಕೂ ಆಸ್ವದಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು, ಯೂಟರ್ನ್ ಮಾಡುವುದಿಲ್ಲ" ಎಂದು ಹೇಳಿದ್ದಾರೆ.
Next Story