ಐಪಿಎಲ್ - 2023 ಪೈನಲ್ ಪಂದ್ಯಕ್ಕೆ ಮಳೆ ಅಡ್ಡಿ: ಚೆನ್ನೈ vs ಗುಜರಾತ್ ನಡುವಿನ ಪಂದ್ಯ ವಿಳಂಬ ಸಾಧ್ಯತೆ
ಅಹಮದಾಬಾದ್: ಅಹಮದಾಬಾದ್‌ನಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚೆನ್ನೈ ಹಾಗೂ ಗುಜರಾತ್ ತಂಡಗಳ ನಡುವಿನ ಫೈನಲ್ ಪಂದ್ಯ ವಿಳಂಬಗೊಳ್ಳುವ ಸಾಧ್ಯತೆ ಇದೆ. ಇದರಿಂದ ಟಾಸ್ ಸಮಯದ ಮೇಲೂ ಪರಿಣಾಮ ಉಂಟಾಗಲಿದೆ. ಒಂದು ವೇಳೆ 9.40 ಗಂಟೆಗೂ ಮುನ್ನ ಪಂದ್ಯ ಶುರುವಾದರೆ ಓವರ್‌ಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ndtv.com ವರದಿ ಮಾಡಿದೆ.
ಈ ನಡುವೆ, ರವಿವಾರ ಕಳೆದ ಬಾರಿಯ ಚಾಂಪಿಯನ್ ಆದ ಗುಜರಾತ್ ಟೈಟನ್ಸ್ ವಿರುದ್ಧ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ ಪಂದ್ಯ ಆಡಲಿರುವುದರಿಂದ ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ನಿರೀಕ್ಷೆ ಮುಗಿಲು ಮುಟ್ಟಿದೆ. ಇದಲ್ಲದೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಿರಿಯ ಆಟಗಾರ ಅಂಬಟಿ ರಾಯುಡು ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ನಿವೃತ್ತಿಯನ್ನು ಘೋಷಿಸಿದ್ದಾರೆ. ಐಪಿಎಲ್ 2023 ಫೈನಲ್ ಪಂದ್ಯವೇ ಈ ಕ್ರೀಡಾಕೂಟದ ನನ್ನ ಅಂತಿಮ ಪಂದ್ಯ ಎಂದು ಅವರು ಪ್ರಕಟಿಸಿದ್ದಾರೆ.
ಈ ಬಾರಿಯ ಫೈನಲ್ ಪಂದ್ಯದಲ್ಲಿ ಎರಡು ಅತ್ಯುತ್ತಮ ಪ್ರದರ್ಶನ ನೀಡಿರುವ ತಂಡಗಳು ಟ್ರೋಫಿಗಾಗಿ ಸೆಣಸಲಿವೆ. ಇದರೊಂದಿಗೆ ಈ ಪಂದ್ಯವು ಎಂ.ಎಸ್.ಧೋನಿ ಪಾಲಿಗೆ ಈ ಕ್ರೀಡಾಕೂಟದ 250ನೇ ಪಂದ್ಯವೂ ಆಗಲಿದೆ.