ಕುಸ್ತಿಪಟುಗಳು ಪೊಲೀಸ್ ವ್ಯಾನ್‌ನಲ್ಲಿ ನಗುತ್ತಾ ಕುಳಿತಿರುವಂತೆ ಫೋಟೊ ಎಡಿಟ್ ಮಾಡಿದ ಕಿಡಿಗೇಡಿಗಳು
ಬಿಜೆಪಿ ಐಟಿ ಸೆಲ್ ವಿರುದ್ಧ ಸಾಮಾಜಿಕ ತಾಣದಲ್ಲಿ ಆಕ್ರೋಶ

ಹೊಸದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನೆಯ ಸಂದರ್ಭದಲ್ಲಿ ಸಂಸತ್ ಭವನದ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟುಗಳನ್ನು ಪೊಲೀಸರು ಅಮಾನವೀಯವಾಗಿ ಬಂಧಿಸಿದ್ದ ವೀಡಿಯೊಗಳು ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿತ್ತು. ಈ ಕುರಿತು ಹಲವರು ಆಕ್ರೋಶವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಕುಸ್ತಿಪಟುಗಳು ಪೊಲೀಸ್ ವ್ಯಾನ್ ನಲ್ಲಿ ನಗುತ್ತಾ ಕುಳಿತಿದ್ದಾರೆಂಬ ತಿರುಚಲ್ಪಟ್ಟ ಫೋಟೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಈ ಫೋಟೊವನ್ನು AI ತಂತ್ರಜ್ಞಾನವನ್ನು ಬಳಸಿ ತಿರುಚಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಯೂಟ್ಯೂಬರ್ ಧ್ರುವ್ ರಾಠೀ ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಕುಸ್ತಿಪಟುಗಳ ನೈಜ ಫೋಟೊವನ್ನೂ ಶೇರ್ ಮಾಡಿದ್ದಾರೆ.
ಈ ನಕಲಿ ಫೋಟೊ ಹಿಂದೆ ಬಿಜೆಪಿ ಐಟಿ ಸೆಲ್ ಕೈವಾಡವಿದೆ ಎಂದು ಧ್ರುವ್ ರಾಠೀ ಸೇರಿದಂತೆ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಸುಳ್ಳುಸುದ್ದಿ ಹರಡಿ ಪ್ರತಿಭಟನೆಯನ್ನು ದಮನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BJP IT cell now started using AI to spread hate on wrestlers. #WrestlersProtest pic.twitter.com/tLI6oKVPFi
— Actual India (@ActualIndia) May 28, 2023
IT Cell Trolls have started using AI softwares now
— Dhruv Rathee (@dhruv_rathee) May 28, 2023
Look at their dirty tactics to defame Olympic Champions. First photo is real, second is manipulated. pic.twitter.com/5MXK2tNcEb