ಐತಿಹಾಸಿಕ ಗೆಲುವು ದಾಖಲಿಸಿದ ಟರ್ಕಿ ಅಧ್ಯಕ್ಷ ಎರ್ದೋಗಾನ್

ಇಸ್ತಾಂಬುಲ್ : ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗಾನ್ ಅವರು ರವಿವಾರ ನಡೆದ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಅವರ ಆಡಳಿತ ಮೂರನೇ ದಶಕಕ್ಕೆ ಪ್ರವೇಶಿಸಿದಂತಾಗಿದೆ. ಚುನಾವಣೆಯಲ್ಲಿ ಎರ್ದೋಗನ್ ಅವರು ಶೇ. 52ರಷ್ಟು ಮತ ಗಳಿಸಿದ್ದರೆ ಅವರ ಎದುರಾಳಿ ಕೆಮಲ್ ಕಿಲಿಕ್ಡರೊಗ್ಲು ಶೇ. 48ರಷ್ಟು ಮತಗಳು ದೊರಕಿವೆ.
“ಇಂದಿನ ಏಕೈಕ ವಿಜೇತ ಟರ್ಕಿ ಆಗಿದೆ” ಎಂದು ತಮ್ಮ ಐತಿಹಾಸಿಕ ಗೆಲುವಿನ ನಂತರ ಪ್ರತಿಕ್ರಿಯಿಸಿದ ಎರ್ದೋಗಾನ್, ದೇಶ ಈ ವರ್ಷ ತನ್ನ ಸ್ಥಾಪನೆಯ ದ್ವಿಶತಮಾನೋತ್ಸವ ಆಚರಿಸುವ ಸಂದರ್ಭ ಅದರ ಪ್ರಗತಿಗೆ ಶ್ರಮಿಸುವ ಭರವಸೆ ನೀಡಿದರು.
69 ವರ್ಷದ ಎರ್ದೋಗಾನ್ ವಿಜಯ ಗಳಿಸುತ್ತಿದ್ದಂತೆಯೇ ಅವರ ಬೆಂಬಲಿಗರು ರಸ್ತೆಗಳಲ್ಲಿ ವಿಜಯೋತ್ಸವ ಆಚರಿಸಿದರು. ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕೆಂದು ಎರ್ದೋಗಾನ್ ಕರೆ ನೀಡಿದ್ದಾರೆ.
Next Story