ಮಳೆಗಾಲದಲ್ಲಿ ಪೂರ್ವ ಸಿದ್ಧತೆಯೊಂದಿಗೆ ಕಾರ್ಯ ನಿರ್ವಹಿಸಲು ವಿವಿಧ ಇಲಾಖೆಗಳಿಗೆ ಸ್ಪೀಕರ್ ಖಾದರ್ ಸೂಚನೆ

ಮಂಗಳೂರು, ಮೇ.29;ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪೂರ್ವ ಸಿದ್ಧತೆ ಯೊಂದಿಗೆ ಕಾರ್ಯ ನಿರ್ವಹಿಸಲು ಜಿಲ್ಲೆಯ ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸೂಚನೆ ನೀಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಜನರಿಗೆ ನೆರವು ನೀಡಲು ಕಟ್ರೋಲ್ ರೂಂ ಆರಂಭಿಸಲು ಜಿಲ್ಲಾ ಡಳಿತ, ಸ್ಥಳೀಯಾಡಳಿತ ಸಂಸ್ಥೆ ಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಪಾಕೃತಿಕ ವಿಕೋಪ, ಮಳೆ ಹಾನಿಗೆ ಸಂಬಂಧಿಸಿದಂತೆ ತುರ್ತು ನೆರವು ನೀಡಲು ಜಿಲ್ಲೆಗೆ ರೂ.3.5ಕೋಟಿ ನಿಧಿ ಬಿಡುಗಡೆ ಮಾಡಲಾಗಿದೆ. ತಕ್ಷಣ ಪರಿಹಾರವಾಗಿ ರೂ 10 ಸಾವಿರ ಹಾಗೂ ಬಳಿಕ ಸಂಪೂರ್ಣ ಹಾನಿಯ ವರದಿಯನ್ನು ವಾರದೊಳಗೆ ನೀಡಿ ಉಳಿದ ಪರಿಹಾರ ಮೊತ್ತವನ್ನು ವಿಳಂಬ ಮಾಡದೆ ಸಂತೃಸ್ತರಿಗೆ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಳಜಿ ಕೇಂದ್ರ ತುರ್ತು ಕಾರ್ಯಾಚರಣೆಗೆ ವಿಶೇಷ ತಂಡ,ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ತ್ವರಿತ ಗೊಳಿಸಲು ,ಜಿಲ್ಲೆಯಲ್ಲಿ ಕುಡಿಯುವ ನೀರು, ಶಾಲಾರಂಭ ,ಆರೋಗ್ಯ ವಿಚಾರ ಗಳಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳು ಸಮಸ್ಯೆ ಪರಿಹಾರ ಮಾಡಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂವಿಧಾನ ಬದ್ಧವಾಗಿ ಸರಕಾರದ ಆಡಳಿತ ನಡೆದಾಗ ಸಮಾಜದಲ್ಲಿ ಶಾಂತಿ, ಸೌಹಾ ರ್ದತೆ,ಸಮಾನತೆ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಜೊತೆಯಾಗಿ ಕಾರ್ಯ ನಿರ್ವಹಿಸಬೇಕಾಗಿದೆ.ಕೋಮು ಸೌಹಾರ್ದತೆ, ಜನರಲ್ಲಿ ಸಾಮರಸ್ಯ ಮೂಡಿಸಲು ಧಾರ್ಮಿಕ ಮುಖಂಡರು ಸಂಘ ಸಂಸ್ಥೆ ಗಳ ಪಾತ್ರ ಮುಖ್ಯ. ಇತ್ತೀಚೆಗೆ ಸಮಾಜದ ಲ್ಲಿ ಉರಿಗೌಡ,ನಂಜೇ ಗೌಡ ಪ್ರಕರಣದ ಬಗ್ಗೆ ಆದಿ ಚುಂಚನಗಿರಿ ಮಠದ ಧಾರ್ಮಿಕ ಮುಖಂಡರ ಹೇಳಿಕೆ ಅನಗತ್ಯ ಗೊಂದಲಗಳಿಗೆ ತೆರೆ ಎಳೆದಂತಾಯಿತು. ಇದೊಂದು ಉದಾಹರಣೆ ನಮಗೆ ಮಾದರಿಯಾಗಿದೆ ಎಂದು ಸ್ಪೀಕರ್ ಖಾದರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಹರೀಶ್ ಕುಮಾರ್, ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು.