ಖಾತೆ ನೀಡಿದ ಬೆನ್ನಲ್ಲೇ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ

ಬೆಂಗಳೂರು, ಮೇ 29: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಚಿವ ಸಂಪುಟ ವಿಸ್ತರಣೆ ಪೂರ್ಣಗೊಂಡಿರುವ ಹಿನ್ನೆಲೆ 12 ಮಂದಿ ನೂತನ ಸಚಿವರುಗಳಿಗೆ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಸಚಿವ ಎಚ್.ಕೆ.ಪಾಟೀಲ್-ವಿಧಾನಸೌಧ ಕೊಠಡಿ ಸಂಖ್ಯೆ 314,314ಎ. ಕೆ.ವೆಂಕಟೇಶ್-ಕೊಠಡಿ ಸಂಖ್ಯೆ 329,329, ಡಾ.ಎಚ್.ಸಿ.ಮಹದೇವಪ್ಪ-ಕೊಠಡಿ ಸಂಖ್ಯೆ 330, 330ಎ. ಕೆ.ಎನ್.ರಾಜಣ್ಣ-ಕೊಠಡಿ ಸಂಖ್ಯೆ 339,339. ಎ.ಶರಣಬಸಪ್ಪ ದರ್ಶನಾಪುರ್-ಕೊಠಡಿ ಸಂಖ್ಯೆ 328,328 ಎ. ನೀಡಲಾಗಿದೆ.
ಸಂತೋಷ್ ಎಸ್.ಲಾಡ್- ಕೊಠಡಿ ಸಂಖ್ಯೆ 342, 342(ಎ), ಸುರೇಶ್ ಬಿ.ಎಸ್.-ಕೊಠಡಿ ಸಂಖ್ಯೆ 316, 316 ಎ., ಲಕ್ಷ್ಮೀ ಹೆಬ್ಬಾಳ್ಕರ್-ಕೊಠಡಿ ಸಂಖ್ಯೆ 301, 301 ಎ. ಬಿ.ನಾಗೇಂದ್ರ-ಕೊಠಡಿ ಸಂಖ್ಯೆ 343, 343 ಎ., ಕೃಷ್ಣಬೈರೇಗೌಡ-ವಿಕಾಸಸೌಧ ಕೊಠಡಿ ಸಂಖ್ಯೆ 244, 245. ಡಾ.ಎಂ.ಸಿ.ಸುಧಾಕರ್-ವಿಕಾಸಸೌಧ ಕೊಠಡಿ ಸಂಖ್ಯೆ 344, 345. ರಹೀಂಖಾನ್-ವಿಕಾಸಸೌಧ ಕೊಠಡಿ ಸಂಖ್ಯೆ 38, 39 ಹಂಚಿಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಡಿಕೆ ಶಿವಕುಮಾರ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್ ಝಮೀರ್ ಅಹ್ಮದ್ ಖಾನ್ ಅವರಿಗೆ ನೀಡಲಾಗಿದ್ದು, ಇದೀಗ 2ನೆ ಹಂತದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.