ಐಪಿಎಲ್ ಫೈನಲ್: ಟಾಸ್ ಜಯಿಸಿ ಬೌಲಿಂಗ್ ಆಯ್ದುಕೊಂಡ ಸಿಎಸ್‌ಕೆ

ಅಹಮದಾಬಾದ್, ಮೇ 29: ಐಪಿಎಲ್ ಟ್ವೆಂಟಿ-20 ಲೀಗ್‌ನ ಫೈನಲ್ ಪಂದ್ಯದಲ್ಲಿ ಟಾಸ್ ಜಯಿಸಿದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ)ನಾಯಕ ಮಹೇಂದ್ರ ಸಿಂಗ್ ಧೋನಿ ಎದುರಾಳಿ ಗುಜರಾತ್ ಟೈಟಾನ್ಸ್ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದರು.
ರವಿವಾರ ನಡೆಯಬೇಕಾಗಿದ್ದ ಫೈನಲ್ ಪಂದ್ಯವು ಭಾರೀ ಮಳೆಯಿಂದಾಗಿ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಉಭಯ ತಂಡಗಳು ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಟಾಸ್‌ಗೆ ಮೊದಲು ಸಮಾರೋಪ ಸಮಾರಂಭ ನಡೆದಿದ್ದು, ಭಾರತದ ಗಾಯಕ ಕಿಂಗ್ ತನ್ನ ಗಾಯನದಿಂದ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
Toss Update
— IndianPremierLeague (@IPL) May 29, 2023
Chennai Super Kings win the toss and elect to field first against Gujarat Titans.
Follow the match https://t.co/WsYLvLrRhp#TATAIPL | #Final | #CSKvGT pic.twitter.com/HYMcLKhfKy
Next Story