5ನೇ ಬಾರಿ ಐಪಿಎಲ್ ಕಿರೀಟಕ್ಕೆ ಮುತ್ತಿಟ್ಟ ಚೆನ್ನೈ ಸೂಪರ್ ಕಿಂಗ್ಸ್
ಕೊನೆ ಎಸೆತದಲ್ಲಿ ಜಡೇಜಾ ಮ್ಯಾಜಿಕ್: ಫೈನಲ್‌ನಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ ರೋಚಕ ಗೆಲುವು
ಕೊನೆ ಎಸೆತದಲ್ಲಿ ಜಡೇಜಾ ಮ್ಯಾಜಿಕ್: ಫೈನಲ್‌ನಲ್ಲಿ ಗುಜರಾತ್ ವಿರುದ್ಧ 5 ವಿಕೆಟ್ ರೋಚಕ ಗೆಲುವು
ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಬೃಹತ್ ಮೊತ್ತದ ಹೊರತಾಗಿಯೂ ಗುಜರಾತ್ ಟೈಟನ್ಸ್ ತಂಡ ಮುಗ್ಗರಿಸಿದ್ದು, ಮತ್ತೆ ಐಪಿಎಲ್ ಟ್ರೋಫಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಡಿಗೇರಿಸಿಕೊಂಡಿದೆ.
15 ಓವರ್ ನಲ್ಲಿ 171 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಚೆನ್ನೈ ತಂಡ ನಿಗದಿತ 15 ಓವರ್ ನಲ್ಲಿ 172 ರನ್ ಗಳಿಸಿ 5 ವಿಕೆಟ್ ಗಳ ಅಂತರ ವಿರೋಚಿತ ಜಯ ದಾಖಲಿಸಿತು.
ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರಲ್ಲಿ ಬರೋಬ್ಬರಿ 214 ರನ್ ಕಲೆ ಹಾಕಿತು. ಆದರೆ ಚೆನ್ನೈ ಗುರಿ ಬೆನ್ನತ್ತುವ ವೇಳೆ ಮಳೆ ಅಡ್ಡಿ ಪಡಿಸಿತು. ಹೀಗಾಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ ಚೆನ್ನೈಗೆ 15 ಓವರಲ್ಲಿ 171 ರನ್ ಗುರಿ ನಿಗದಿಪಡಿಸಲಾಯಿತು.
Next Story