ಗುಜರಾತ್: ಅಕಾಲಿಕ ಗಾಳಿ, ಆಲಿಕಲ್ಲು ಮಳೆಗೆ 9 ಬಲಿ

ಅಹ್ಮದಾಬಾದ್: ಅಕಾಲಿಕ ಗಾಳಿ ಮತ್ತು ಆಲಿಕಲ್ಲು ಮಳೆ ಗುಜರಾತ್ ಮತ್ತು ರಾಜಸ್ಥಾನದಲ್ಲಿ ವ್ಯಾಪಕ ಹಾನಿಯನ್ನು ಉಂಟು ಮಾಡಿದ್ದು, ವಿವಿಧ ಮಳೆ ಸಂಬಂಧಿ ಅನಾಹುತಗಳಿಂದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ಪ್ರಕಟಿಸಿದೆ.
ಅಹ್ಮದಾಬಾದ್ ಸೇರಿದಂತೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ರಭಸದ ಗಾಳಿ ಮುಂದುವರಿದಿದ್ದು, ಮಂಗಳವಾರ ಕೂಡಾ ಮಳೆಯಾಗುವ ನಿರೀಕ್ಷೆ ಇದೆ. ಇದುವರೆಗೆ ರಾಜ್ಯದಲ್ಲಿ 34.7 ಮಿಲಿಮೀಟರ್ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಪಶ್ಚಿಮ ಪ್ರಕ್ಷುಬ್ಧತೆ ಮತ್ತು ಬಿರುಗಾಳಿ ಮಾರ್ಚ್ 1 ರಿಂದ ಮೇ 29ರವರೆಗೆ ಅಧಿಕ ಮಳೆಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ.
Next Story