ಉಡುಪಿ: ಕೊನೆಗೂ ಸುರಿದ ಬಹು ನಿರೀಕ್ಷಿತ ಮಳೆ

ಉಡುಪಿ, ಮೇ 30: ಕಳೆದೊಂದು ತಿಂಗಳಿನಿಂದ ನಿರೀಕ್ಷಿಸಲಾಗಿದ್ದ ಮುಂಗಾರು ಪೂರ್ವ ಮಳೆ ಇಂದು ಮುಂಜಾನೆ ಜಿಲ್ಲಾದ್ಯಂತ ಧಾರಾಕಾರವಾಗಿ ಸುರಿಯಿತು.
ಈ ಮೂಲಕ ಕೆಂಡದುಂಡೆಯಂತೆ ಸುಡುತ್ತಿದ್ದ ವಾತಾವರಣ ತಾತ್ಕಾಲಿಕವಾಗಿ ಸಹನೀಯವಾಯಿತು. ಸೆಕೆಯಿಂದ ಕಂಗೆಟ್ಟಿದ್ದ, ನೀರಿಗಾಗಿ ಪರಿತಪಿಸುತಿದ್ದ ಜಿಲ್ಲೆಯ ಜನತೆಗೆ ಈ ಮಳೆ ಕೆಲ ಹೊತ್ತಾದರೂ ತಂಪಿನ ಸಿಂಚನವೆರಚಿತು.
ಬೆಳಗ್ಗೆ ಎಂಟು ಗಂಟೆಗೆ ಪ್ರಾರಂಭಗೊಂಡ ಮಳೆ ಮುಕ್ಕಾಲು ಗಂಟೆ ಧಾರಾಕಾರವಾಗಿ ಸುರಿಯಿತು.
ಇದರಿಂದ ಕೆಲಸಕ್ಕೆ ತೆರಳಲು ಸಿದ್ಧರಾಗುತಿದ್ದವರು ಕೊಡೆ ಹುಡುಕಬೇಕಾಯಿತು.
ಮೊದಲ ಮಳೆಯಲ್ಲೇ ರಾಷ್ಟ್ರೀಯ ಹೆದ್ದಾರಿ ಮಳೆ ನೀರಿನಿಂದ ತುಂಬಿದ್ದು, ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಬೇಕಾಯಿತು.



Next Story