ಚಿಕ್ಕಮಗಳೂರು: ಕಳಪೆ ಗುಣಮಟ್ಟದ ಆಲೂಗಡ್ಡೆ ವಿತರಣೆ; ಆಕ್ರೋಶಗೊಂಡ ರೈತರು
ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ ರೈತ

ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ ರೈತ
ಚಿಕ್ಕಮಗಳೂರು: ಆಲೂಗಡ್ಡೆ ಬೀಜ ನೆಲದಲ್ಲಿ ಕರಗಿಹೋದ ಕಾರಣ ಮನನೊಂದ ರೈತ ಆಲೂಗಡ್ಡೆ ಬೆಳೆ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ ಘಟನೆ ತಾಲೂಕಿನ ಸಿರ್ಗಾಪುರ ಗ್ರಾಮದಲ್ಲಿ ನಡೆದಿದೆ.
5 ದಿನದಲ್ಲಿ ಬೆಳೆಯುತ್ತದೆ ಎಂದು ಹಾಸನದ ಆಲೂಗಡ್ಡೆ ಮಂಡಿಯಲ್ಲಿ ಕೊಟ್ಟ ಬೀಜವನ್ನು 60-70 ರೈತರು ಮೂರು ಲಾರಿಯಲ್ಲಿ ತಂದು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದರು.
ಆದರೆ 15 ದಿನವಾದರೂ ಬೆಳೆ ಬಾರದ್ದನ್ನು ಕಂಡು ರೈತರೊಬ್ಬರು ತಮ್ಮ 10 ಎಕರೆ ಜಮೀನಿನ ಮೇಲೆ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ.
ತಮಗೆ ಕಳಪೆ ಗುಣಮಟ್ಟದ ಆಲೂಗಡ್ಡೆ ನೀಡಿದ್ದಾರೆ. ನಮಗೆ ನ್ಯಾಯ ಅನ್ನೋದೇ ಇಲ್ವಾ ಎಂದು ರೈತರು ಮಂಡಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
Next Story