ಜಡೇಜಾ ಕುರಿತು 'ಬಿಜೆಪಿ ಕಾರ್ಯಕರ್ತ ಚೆನ್ನೈ ತಂಡ ಐಪಿಎಲ್ ಕಪ್ ಗೆಲ್ಲಲು ನೆರವಾದರು' ಎಂದ ಅಣ್ಣಾಮಲೈ

ಚೆನ್ನೈ: ಐದನೇ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಫೈನಲ್ ನಲ್ಲಿ ಗುಜರಾತ್ ತಂಡದ ವಿರುದ್ಧ ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದರು. ರವೀಂದ್ರ ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ತಂಡಕ್ಕೆ ಜಯ ತಂದಿತ್ತಿದ್ದರು. ಇದೀಗ ಜಡೇಜಾ 'ಬಿಜೆಪಿ ಕಾರ್ಯಕರ್ತ' ಎಂದು ಹೇಳುವ ಮೂಲಕ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸುದ್ದಿಗೆ ಗ್ರಾಸವಾಗಿದ್ದಾರೆ.
ಫೈನಲ್ ನಲ್ಲಿ ಚೆನ್ನೈ ತಂಡ ಗೆಲುವು ದಾಖಲಿಸಿದ ವೇಳೆ ಅದನ್ನು ಕೊಂಚ ರಾಜಕೀಯಕರಣಗೊಳಿಸಿದ್ದ ಡಿಎಂಕೆ ಪಕ್ಷವು, 'ಇದು ಗುಜರಾತ್ ಮಾಡೆಲ್ ವಿರುದ್ಧ ದ್ರಾವಿಡಿಯನ್ ಮಾಡೆಲ್ ನ ಜಯ' ಎಂದಿದ್ದರು. ಈ ಕುರಿತು ಪತ್ರಕರ್ತರೊಬ್ಬರು ಅಣ್ಣಾಮಲೈಗೆ ಪ್ರಶ್ನೆ ಕೇಳಿದಾಗ, ಚೆನ್ನೈ ತಂಡಕ್ಕೆ ಕಪವ ಗೆಲ್ಲಲು ನೆರವಾಗಿದ್ದು ಓರ್ವ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದಾರೆ.
ಜಡೇಜಾರನ್ನು ಉಲ್ಲೇಖಿಸಿದ ಅವರು, ಜಡೇಜಾ ಒಬ್ಬ ಬಿಜೆಪಿ ಕಾರ್ಯಕರ್ತ ಅವರು ಗುಜರಾತ್‌ನವರಾಗಿದ್ದಾರೆ. ಅವರ ಪತ್ನಿ ಬಿಜೆಪಿ ಎಂಎಲ್‌ಎ. ನನಗೂ ತಮಿಳಿಗ ಅನ್ನುವುದರ ಕುರಿತು ಹೆಮ್ಮೆಯಿದೆ. ಗುಜರಾತ್ ತಂಡದಲ್ಲಿ ಸಿಎಸ್‌ಕೆಗಿಂತ ಹೆಚ್ಚಿನ ತಮಿಳು ಆಟಗಾರರಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ.